ADVERTISEMENT

ಸೋಮವಾರ, 5–2–1973: ಪೈಗೆ ಭಾರಿ ಎಂಜಿನಿಯರಿಂಗ್‌, ಮಿಶ್ರಾಗೆ ರೈಲ್ವೆ ಖಾತೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 19:30 IST
Last Updated 4 ಫೆಬ್ರುವರಿ 2023, 19:30 IST
   

ಪೈಗೆ ಭಾರಿ ಎಂಜಿನಿಯರಿಂಗ್‌, ಮಿಶ್ರಾಗೆ ರೈಲ್ವೆ ಖಾತೆ

ನವದೆಹಲಿ, ಫೆ. 4– ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಇಂದು ಕೇಂದ್ರ ಸಂಪುಟದಲ್ಲಿ ಬದಲಾವಣೆಗಳನ್ನು ಪ್ರಕಟಿಸಿದರು. ಕೆಲವರು ಹೊಸ ಸಚಿವರ ನೇಮಕದ ಜೊತೆಗೆ ಟಿ.ಎ. ಪೈ, ಉಮಾಶಂಕರ ದೀಕ್ಷಿತ್‌ ಮತ್ತು ಎಲ್‌.ಎನ್‌. ಮಿಶ್ರಾ ಅವರುಗಳ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದೆ.

ರೈಲ್ವೆ ಸಚಿವ ತೋನ್ಸೆ ಅನಂತ ಪೈ ಅವರಿಗೆ ಹೆವಿ ಎಂಜಿನಿಯರಿಂಗ್‌ ಖಾತೆಯನ್ನು ವಹಿಸಿಕೊಡಲಾಗಿದೆ. ಎಲ್‌.ಎನ್‌. ಮಿಶ್ರಾ ಅವರಿಗೆ ಕ್ಯಾಬಿನೆಟ್‌ ದರ್ಜೆಗೆ ಬಡ್ತಿ ನೀಡಿ ರೈಲ್ವೆ ಸಚಿವರನ್ನಾಗಿ ನೇಮಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.