ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 2–11–1972

ಪ್ರಜಾವಾಣಿ ವಿಶೇಷ
Published 1 ನವೆಂಬರ್ 2022, 20:00 IST
Last Updated 1 ನವೆಂಬರ್ 2022, 20:00 IST
   

ರಾಜ್ಯದಲ್ಲಿ ಸಡಗರದ ಪ್ರಥಮ ಜನತಾ ರಾಜ್ಯೋತ್ಸವ

ಬೆಂಗಳೂರು, ನ. 1– ಸುಂದರ ವಿಧಾನಸೌಧದ ಮಹಾದ್ವಾರದ ಮುಂದಿನ ಭಾರಿ ಸೋಪಾನ. ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಡಲು ಕಾರಣರಾದ ಮುಖ್ಯಮಂತ್ರಿ ಶ್ರೀ ಅರಸು ಹಾಗೂ ಮತ್ತಿತರರಿಗೆ ಮೈಸೂರು ಪೇಟ ಹಾಕಿ ಗೌರವಾರ್ಪಣೆ.

ಕರ್ನಾಟಕ ಉದಯವಾದ ನಂತರ ಸಾವಿರಾರು ಮಂದಿ ಹಾಜರಿದ್ದು ನಡೆದ ರಾಜ್ಯೋತ್ಸವದ ಪ್ರಥಮ ಜನತಾ ಸಮಾರಂಭ!

ADVERTISEMENT

ಕರ್ನಾಟಕಕ್ಕೆ ದುಡಿದವರನ್ನು ಕೃತಜ್ಞತೆಯಿಂದ ಸ್ಮರಿಸಿ, ಹೆಸರಿನ ಬದಲಾವಣೆ ‘ನಿಮಿತ್ತ ಮಾತ್ರವಾದ’ ಮುಖ್ಯಮಂತ್ರಿಗಳು ನಮ್ರತೆಯಿಂದ ಗೌರವ ಸ್ವೀಕರಿಸಿದರು. ಕನ್ನಡ ಚಳುವಳಿಗಾರರು ತಮ್ಮ ರಾಜ್ಯದ ಹೆಸರಿನ ಬದಲಾವಣೆಯಾಗಬೇಕೆಂಬ ಬೇಡಿಕೆ ಈಡೇರಿದ ಸಂತೋಷದಿಂದ ಆಚರಿಸಿದ ರಾಜ್ಯೋತ್ಸವವಿದು. ಇದು ನಗರದಲ್ಲಿ ನಡೆದ ಪ್ರಮುಖ ಹಾಗೂ ಆಕರ್ಷಣೀಯ ಕಾರ್ಯಕ್ರಮ.

ಮೈಸೂರು ಬ್ಯಾಂಕ್‌ ಚೌಕದಿಂದ ಹೊರಟ ಸ್ಥಿರ ದೃಶ್ಯಗಳಿಂದ ಕೂಡಿದ್ದ ಮೆರವಣಿಗೆ ವಿಧಾನಸೌಧವನ್ನು ತಲುಪಿದ ನಂತರ ಸಮಾರಂಭ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.