ADVERTISEMENT

50 ವರ್ಷಗಳ ಹಿಂದೆ: ಭಾನುವಾರ, 18–4–1971

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 21:30 IST
Last Updated 17 ಏಪ್ರಿಲ್ 2021, 21:30 IST
   

ಪ್ರಜಾಸತ್ತಾತ್ಮಕ ಬಾಂಗ್ಲಾದೇಶ ಗಣರಾಜ್ಯ ಅಸ್ತಿತ್ವಕ್ಕೆಹಂಗಾಮಿ ಅಧ್ಯಕ್ಷರಿಂದ ಸ್ವಾತಂತ್ರ್ಯ ಘೋಷಣೆ

ಮುಜೀನಗರ, ಬಾಂಗ್ಲಾದೇಶ, ಏ.17– ಹಂಗಾಮಿ ಅಧ್ಯಕ್ಷ ಸೈಯದ್‌ ನಸರುಲ್‌ ಇಸ್ಲಾಂ ಅವರಿಂದ ಚರಿತ್ರಾರ್ಹವಾದ ಸ್ವಾತಂತ್ರ್ಯ ಘೋಷಣೆಯೊಂದಿಗೆ ಬಾಂಗ್ಲಾ ದೇಶದ ಪರಮಾಧಿಕಾರ ಪ್ರಜಾಸತ್ತಾತ್ಮಕ ಗಣರಾಜ್ಯವು ಇಂದು ಔಪಚಾರಿಕವಾಗಿ ಅಸ್ತಿತ್ವಕ್ಕೆ ಬಂದಿತು.

ಮಾವಿನ ತೋಪಿನ ನೆರಳಿನಲ್ಲಿ ‘ಜೈ ಬಾಂಗ್ಲಾ’ ಘೋಷಣೆಗಳ ನಡುವೆ ಹಸಿರು, ಕೆಂಪು, ಹೊಂಬಣ್ಣದ ಬಾಂಗ್ಲಾ ಧ್ವಜ ಸ್ಥಂಭದ ಬಳಿ ನಿಂತು ನಸರುಲ್‌ ಇಸ್ಲಾಂ ಅವರು ಸ್ವಾತಂತ್ರ್ಯ ಘೋಷಣೆ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.