ADVERTISEMENT

50 ವರ್ಷದ ಹಿಂದೆ | ಕರ್ನಾಟಕಕ್ಕೆ ಬೆಳಗಾವಿ ಮಹಾಜನ್ ವರದಿಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 0:45 IST
Last Updated 30 ಏಪ್ರಿಲ್ 2025, 0:45 IST
<div class="paragraphs"><p>50 ವರ್ಷಗಳ ಹಿಂದೆ</p></div>

50 ವರ್ಷಗಳ ಹಿಂದೆ

   

ಕರ್ನಾಟಕಕ್ಕೆ ಬೆಳಗಾವಿ ಮಹಾಜನ್ ವರದಿಗೆ ಒಪ್ಪಿಗೆ

ನವದೆಹಲಿ, ಏ. 29– ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕೆಂಬುದೂ ಸೇರಿದಂತೆ ಮಹಾಜನ್ ಆಯೋಗದ ಪ್ರಮುಖ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಕಾರ್ಯಗತಗೊಳಿಸಬೇಕೆಂಬ ತೀರ್ಮಾನಕ್ಕೆ ಗೃಹ ಸಚಿವಾಲಯ ಬಂದಿದೆ.

ಆಯೋಗದ ಶಿಫಾರಸುಗಳ ಪರೀಕ್ಷೆಯನ್ನು ಸಚಿವಾಲಯವು ಪೂರ್ಣಗೊಳಿಸಿದೆ.

ADVERTISEMENT

ಗೃಹ ಸಚಿವ ಕೆ. ಬ್ರಹ್ಮಾನಂದ ರೆಡ್ಡಿ ಅವರು ಈಗಾಗಲೇ ಈ ಸಂಬಂಧದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರೊಡನೆ ಮಾತುಕತೆ ನಡೆಸಿದ್ದಾರೆ.

ಆಯೋಗದ ಪ್ರಮುಖ ಶಿಫಾರಸುಗಳನ್ನು ತಿರಸ್ಕರಿಸುವುದಕ್ಕೆ ಗಾಂಧಿ ಅವರು ವಿರೋಧವಾಗಿದ್ದಾರೆಂದು ವರದಿಯಾಗಿದೆ. ಹೀಗೆ ಮಾಡಿದರೆ ಅದು ಅಪಾಯಕಾರಕ ಸಂಪ್ರದಾಯ ಹಾಕಿಕೊಟ್ಟಂತೆ ಆಗುವುದು ಎಂಬುದು ಅವರ ಅಭಿಪ್ರಾಯ.

ಚುನಾವಣೆ ವೆಚ್ಚದ ಮಿತಿ ಏರಿಕೆ ಪ್ರಶ್ನೆ ಪರಿಶೀಲನೆಯಲ್ಲಿ

ನವದೆಹಲಿ, ಏ. 29– ಚುನಾವಣೆ ವೆಚ್ಚದ ಮಿತಿಯನ್ನು ಹೆಚ್ಚಿಸುವ ಪ್ರಶ್ನೆಯನ್ನು ಸರ್ಕಾರವು ರಾಜಕೀಯ ಪಕ್ಷಗಳ ಜತೆ ಸಮಾಲೋಚಿಸಿ, ಪರಿಶೀಲಿಸುತ್ತಿದೆ ಎಂದು ಕಾನೂನು ಸಚಿವ ಎಚ್‌.ಆರ್‌. ಗೋಖಲೆ ಇಂದು ಲೋಕಸಭೆಗೆ ತಿಳಿಸಿದರು.

ಅಲ್ಲದೆ ಅಭ್ಯರ್ಥಿಗಳ ವೆಚ್ಚವನ್ನು ತುಂಬಿಕೊಡುವ ಪ್ರಶ್ನೆಯನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದೂ ಅವರು ಸ್ವರಣ್‌ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.