ಬುಧವಾರ, 17–7–1974
ಸೈಪ್ರಸ್ ಸೇನಾಕ್ರಾಂತಿ ಯಶಸ್ವಿಯಾಗಿಲ್ಲ: ಮಕಾರಿಯೋಸ್ ಹೇಳಿಕೆ
ಬೈರೂತ್, ಜುಲೈ 16– ಸೈಪ್ರಸ್‌ನಲ್ಲಿ ನಡೆದ ಕ್ಷಿಪ್ರ ಸೇನಾಕ್ರಾಂತಿ ಎದುರಿಸುವುದರಲ್ಲಿ ಜನತೆಗೆ ನೆರವು ನೀಡಬೇಕೆಂದು ಅಧ್ಯಕ್ಷ ಮಕಾರಿಯೋಸ್ ಅವರು ಇಂದು ವಿಶ್ವದ ಶಕ್ತಿ ರಾಷ್ಟ್ರಗಳಲ್ಲಿ ಮನವಿ ಮಾಡಿಕೊಂಡ ವಿಷಯವನ್ನು ಬೈರೂತ್ ರೇಡಿಯೊ ಬಿತ್ತರಿಸಿತು.
ಜನತಾ ವಿರೋಧದ ಕಾರಣ ಸೇನಾಕ್ರಾಂತಿ ಫಲಿಸಿಲ್ಲ. ‘ನಾನಿನ್ನೂ ಜೀವಂತ
ವಾಗಿದ್ದೇನೆ’ ಎಂದು ಮಕಾರಿಯೋಸ್ ಹೇಳಿದರೆಂದು ಅದೇ ರೇಡಿಯೊ ತಿಳಿಸಿತು.
ಆರ್ಚ್ ಬಿಷಪ್ ಮಕಾರಿಯೋಸ್ ಅವರು ಸೇನಾಕ್ರಾಂತಿಯಲ್ಲಿ ಸತ್ತುಹೋದರೆಂದು ಬಂಡಾಯ ರೇಡಿಯೊ ಬಿತ್ತರಿಸಿತ್ತು.
ಕೇಂದ್ರ, ರಾಜ್ಯ ಸರ್ಕಾರಗಳ ಬಲ ಕುಗ್ಗಿಸಲು ವಿರೋಧ ಪಕ್ಷಗಳ ಯತ್ನ
ಭೋಪಾಲ್, ಜುಲೈ 16– ವಿರೋಧ ಪಕ್ಷಗಳು ‘ಭ್ರಷ್ಟಾಚಾರದ ಸುಳ್ಳು ಆಪಾದನೆಗಳನ್ನು’ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ
ಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಆರೋಪಿಸಿದ್ದಾರೆ.
ವಿರೋಧ ಪಕ್ಷಗಳು ದೇಶದ ಆರ್ಥಿಕ ಸಮಸ್ಯೆಗಳನ್ನು ನಿವಾರಣೆ ಮಾಡಲು ಸರ್ಕಾರಕ್ಕೆ ನೆರವಾಗುವುದರ ಬದಲು, ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುವಂತೆ ಮಾಡಿ ಬಡಜನರ ಸಂಕಷ್ಟ ಹೆಚ್ಚಲು
ಕಾರಣವಾಗುತ್ತಿವೆ ಎಂದೂ ಅವರು ಇಂದು ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದರಲ್ಲಿ ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.