ADVERTISEMENT

50 ವರ್ಷಗಳ ಹಿಂದೆ: 29–06–1992

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 20:15 IST
Last Updated 28 ಜೂನ್ 2022, 20:15 IST
   

‘ಕನ್ನಡದ ಕೆಲಸಕ್ಕೆ ಹಣ ವಿನಿಯೋಗಕ್ಕೆ ಹಿಂದೆ ಬೀಳುವುದಿಲ್ಲ’

ಬೆಂಗಳೂರು, ಜೂನ್‌ 28–‘ಕನ್ನಡದ ಕೆಲಸಕ್ಕೆ ದುಡ್ಡು ಯಾವ ರೀತಿಯೂ ಕಡಿಮೆ ಬೀಳುವುದಿಲ್ಲ’ ಎಂದು ಹಣಕಾಸಿನ ಸಚಿವ ಶ್ರೀ ಎಂ.ವೈ. ಘೋರ್ಪಡೆ ಅವರುಇಂದು ವಿಧಾನಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು.

ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ಕನ್ನಡಕ್ಕೆ 10 ಲಕ್ಷ ರೂ. ಇಟ್ಟಿದ್ದೇವೆ. ಅದನ್ನು ಯಾವ ರೀತಿ ಸದುಪಯೋಗ ಮಾಡಬೇಕು ಎಂದು ಸಲಹೆ ನೀಡುವುದು ನಿಮ್ಮ ಕರ್ತವ್ಯ’ ಎಂದು ಸದಸ್ಯರನ್ನು ಕೋರಿದರು.

ADVERTISEMENT

‘ಇನ್ನಷ್ಟು ಹಣ ಬೇಕಾದರೆ ಒದಗಿಸಲು ಸಿದ್ಧ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.