ADVERTISEMENT

50 ವರ್ಷಗಳ ಹಿಂದೆ ಈ ದಿನ: ‘ಬಾಂಗ್ಲಾದೇಶ ಪಾಕ್‌ ಯುದ್ಧ ಬಂದಿಗಳ ವಿಚಾರಣೆ ನಡೆಸದು’

ಪ್ರಜಾವಾಣಿ ವಿಶೇಷ
Published 24 ಫೆಬ್ರುವರಿ 2024, 19:45 IST
Last Updated 24 ಫೆಬ್ರುವರಿ 2024, 19:45 IST
<div class="paragraphs"><p>50 ವರ್ಷಗಳ ಹಿಂದೆ </p></div>

50 ವರ್ಷಗಳ ಹಿಂದೆ

   

‘ಬಾಂಗ್ಲಾದೇಶ ಪಾಕ್‌ ಯುದ್ಧ ಬಂದಿಗಳ ವಿಚಾರಣೆ ನಡೆಸದು’

ಲಾಹೋರ್‌, ಫೆ. 24– ಯುದ್ಧಾಪರಾಧಕ್ಕಾಗಿ 195 ಮಂದಿ ಪಾಕಿಸ್ತಾನಿ ಯುದ್ಧ ಬಂದಿಗಳ ವಿಚಾರಣೆ ನಡೆಸುವುದನ್ನು ಬಾಂಗ್ಲಾದೇಶ ಕೈ ಬಿಡುತ್ತದೆ ಎಂದು ಈಜಿಪ್ಟಿನ ಅಧ್ಯಕ್ಷ ಅನ್ವರ್‌ ಸಾದತ್‌ ಅವರು ಇಂದು ಸೂಚಿಸಿದರು.

ADVERTISEMENT

ಇಲ್ಲಿ ನಡೆಯುತ್ತಿರುವ ಇಸ್ಲಾಮಿ ಶೃಂಗಸಭೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಮುಜೀಬುರ್‌ ರೆಹಮಾನ್‌ ಅವರು ಭಾಗವಹಿಸಲನುವಾಗುವಂತೆ ಸಕಾಲದಲ್ಲಿ ತಮ್ಮ ರಾಷ್ಟ್ರದ ಪೂರ್ವ ವಿಭಾಗಕ್ಕೆ ಸ್ವತಂತ್ರ ರಾಷ್ಟ್ರದ ಮಾನ್ಯತೆ ನೀಡಿದ ಪಾಕಿಸ್ತಾನದ ಪ್ರಧಾನಿ ಭುಟ್ಟೋ ಅವರನ್ನು ಸಾದತ್‌ ಅವರು ಕೊಂಡಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.