ಗಡಿಯಲ್ಲಿ ಪಾಕ್ ಸೇನೆ ‘ಅಸಾಧಾರಣ’ ಚಲನೆ, ವ್ಯೂಹಗಳ ರಚನೆ
ನವದೆಹಲಿ, ಜುಲೈ 12– ಭಾರತ–ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನಿ ಸೇನಾ ತುಕಡಿಗಳು ಭಾರಿ ಪ್ರಮಾಣದ ಸೈನಿಕರ ಚಲನವಲನ ಹಾಗೂ ವ್ಯೂಹರಚನೆಯನ್ನು ಆರಂಭಿಸಿವೆಯೆಂದು ಅಧಿಕೃತ ವಕ್ತಾರ
ರೊಬ್ಬರು ತಿಳಿಸಿದರು.
ಇದನ್ನು ಭಾರತ ಗಡಿ ಬಳಿ ನಡೆಯುತ್ತಿರುವ ಅಸಾಧಾರಣ ಮಿಲಿಟರಿ ಚಟುವಟಿಕೆ ಎಂದು ವಕ್ತಾರರು ಕರೆದರು. ಭಾರತದಿಂದ ಬೆದರಿಕೆ ಇದೆಯೆಂಬ ಭಾವನೆಯನ್ನು ಪಾಕಿಸ್ತಾನದಲ್ಲುಂಟು ಮಾಡುವ ಯತ್ನದ ಅಂಗವಾಗಿ ಈ ಪ್ರಯತ್ನ ನಡೆದಿದೆಯೆಂದೂ ಅವರು ಹೇಳಿದರು.
ಬಿಹಾರ ಚಳವಳಿಯಲ್ಲಿ ಪಾಲ್ಗೊಳ್ಳಲು ಸರ್ವೋದಯ ಕಾರ್ಯಕರ್ತರಿಗೆ ಸ್ವಾತಂತ್ರ್ಯ
ವಾರ್ಧಾ, ಜುಲೈ 12– ಜಯಪ್ರಕಾಶ ನಾರಾಯಣ್ ಅವರು ಬಿಹಾರದಲ್ಲಿ ಆರಂಭಿಸಿರುವ ಚಳವಳಿ ಬಗ್ಗೆ ಅಖಿಲ ಭಾರತ ಸರ್ವಸೇವಾ ಸಂಘದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಆಚಾರ್ಯ ವಿನೋಬಾ ಭಾವೆಯವರ ಮಧ್ಯ
ಪ್ರವೇಶದಿಂದಾಗಿ ಕೊನೆಗೊಂಡಿತು.
ಸರ್ವೋದಯ ಕಾರ್ಯಕರ್ತರು ಚಳವಳಿಯಲ್ಲಿ ಭಾಗವಹಿಸುವುದಕ್ಕೆ ಭಾವೆ ಒಪ್ಪಿಗೆ ನೀಡಿದ್ದಾರೆ. ಚಳವಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರುವುದರಲ್ಲಿ ವಿಫಲರಾಗಿ ಸರ್ವ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ 17 ಮಂದಿ ರಾಜೀನಾಮೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.