ADVERTISEMENT

50 ವರ್ಷಗಳ ಹಿಂದೆ| ಬೆಲೆ ಹತೋಟಿಗೆ ನಿರ್ದಿಷ್ಟ ಕ್ರಮ: ರಾಜ್ಯಪಾಲರಿಂದ ವಿವರಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಬೆಂಗಳೂರು: ಫೆ. 25– ಬೆಲೆ ಏರಿಕೆಯ ನಿಯಂತ್ರಣ ಮತ್ತು ನಿತ್ಯಾವಶ್ಯಕ ವಸ್ತುಗಳ ಸಮರ್ಪಕ ವಿತರಣೆಗೆ ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರ ಕೈಗೊಳ್ಳಲಿರುವ ನಿರ್ದಿಷ್ಟ ಕ್ರಮಗಳನ್ನು ರಾಜ್ಯಪಾಲ ಶ್ರೀ ಮೋಹನ್‌ ಲಾಲ್‌ ಸುಖಾಡಿಯಾ ಅವರು ಇಂದು ವಿಧಾನ ಮಂಡಲದ ಉಭಯ ಸದನಗಳ ಸಂಯುಕ್ತ ಅಧಿವೇಶನದಲ್ಲಿ ಪ್ರಕಟಿಸಿದರು.

ಮಂಗಳೂರಿನಲ್ಲಿ ಪೂರ್ತಿ ಹಾಗೂ ಹುಬ್ಬಳ್ಳಿ– ಧಾರವಾಡ, ಮೈಸೂರು, ಬೆಳಗಾವಿ, ಕಲ್ಬುರ್ಗಿಯಲ್ಲಿ ಹಂತಹಂತವಾಗಿ ಅನೌಪಚಾರಿಕ ಪಡಿತರದ ಜಾರಿ ಈ ದಿಸೆಯಲ್ಲಿ ಮೊದಲನೇ ಕ್ರಮವಾದರೆ, ಸೀಮೆಎಣ್ಣೆ, ಟೈರು, ಶಿಶುಗಳ ಆಹಾರದಂಥ ಅಗತ್ಯ ವಸ್ತುಗಳನ್ನು ಸಹಕಾರಿ ಸಂಘಗಳ ಮೂಲಕ
ನ್ಯಾಯಬೆಲೆಯಲ್ಲಿ ಪೂರೈಸುವುದು ಇನ್ನೊಂದು ಹೆಜ್ಜೆ.

ಭೂಸುಧಾರಣೆ ವಿಧೇಯಕ ಜಾರಿಗೆ ಕ್ರಮ

ADVERTISEMENT

ಬೆಂಗಳೂರು, ಫೆ. 25– ರಾಷ್ಟ್ರಪತಿಯವರ ಸಹಿ ಪಡೆದಿರುವ ಕರ್ನಾಟಕದ ಭೂ ಸುಧಾರಣಾ ವಿಧೇಯಕದ ಜಾರಿಗೆ ಸರ್ಕಾರವು ಸಮರ್ಪಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ರಾಜ್ಯಪಾಲ ಶ್ರೀ ಮೋಹನ್‌ಲಾಲ್‌ ಸುಖಾಡಿಯಾ ಅವರು ವಿಧಾನ ಮಂಡಲಕ್ಕೆ ತಿಳಿಸಿದರು.

ರಾಜ್ಯಕ್ಕೆ ಬರಬೇಕಾಗಿರುವುದಕ್ಕಿಂತ ಕಡಿಮೆ ನೀರನ್ನು ಪಾಲು ಮಾಡಿರುವ ಕೃಷ್ಣಾ ಜಲ ವಿವಾದ ಪಂಚಾಯ್ತಿಯ ತೀರ್ಪಿನಿಂದ ಯಾವ ರೀತಿಯಲ್ಲಿ ರಾಜ್ಯದ ಆಸಕ್ತಿಯನ್ನು ಕಾಯಲು ಸಾಧ್ಯವೋ ಅಂಥ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಹೇಳಿದರು., ಫೆ. 25– ಬೆಲೆ ಏರಿಕೆಯ ನಿಯಂತ್ರಣ ಮತ್ತು ನಿತ್ಯಾವಶ್ಯಕ ವಸ್ತುಗಳ ಸಮರ್ಪಕ ವಿತರಣೆಗೆ ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರ ಕೈಗೊಳ್ಳಲಿರುವ ನಿರ್ದಿಷ್ಟ ಕ್ರಮಗಳನ್ನು ರಾಜ್ಯಪಾಲ ಶ್ರೀ ಮೋಹನ್‌ ಲಾಲ್‌ ಸುಖಾಡಿಯಾ ಅವರು ಇಂದು ವಿಧಾನ ಮಂಡಲದ ಉಭಯ ಸದನಗಳ ಸಂಯುಕ್ತ ಅಧಿವೇಶನದಲ್ಲಿ ಪ್ರಕಟಿಸಿದರು.

ಮಂಗಳೂರಿನಲ್ಲಿ ಪೂರ್ತಿ ಹಾಗೂ ಹುಬ್ಬಳ್ಳಿ– ಧಾರವಾಡ, ಮೈಸೂರು, ಬೆಳಗಾವಿ, ಕಲ್ಬುರ್ಗಿಯಲ್ಲಿ ಹಂತಹಂತವಾಗಿ ಅನೌಪಚಾರಿಕ ಪಡಿತರದ ಜಾರಿ ಈ ದಿಸೆಯಲ್ಲಿ ಮೊದಲನೇ ಕ್ರಮವಾದರೆ, ಸೀಮೆಎಣ್ಣೆ, ಟೈರು, ಶಿಶುಗಳ ಆಹಾರದಂಥ ಅಗತ್ಯ ವಸ್ತುಗಳನ್ನು ಸಹಕಾರಿ ಸಂಘಗಳ ಮೂಲಕ
ನ್ಯಾಯಬೆಲೆಯಲ್ಲಿ ಪೂರೈಸುವುದು ಇನ್ನೊಂದು ಹೆಜ್ಜೆ.

ಭೂಸುಧಾರಣೆ ವಿಧೇಯಕ ಜಾರಿಗೆ ಕ್ರಮ

ಬೆಂಗಳೂರು: ಫೆ. 25– ರಾಷ್ಟ್ರಪತಿಯವರ ಸಹಿ ಪಡೆದಿರುವ ಕರ್ನಾಟಕದ ಭೂ ಸುಧಾರಣಾ ವಿಧೇಯಕದ ಜಾರಿಗೆ ಸರ್ಕಾರವು ಸಮರ್ಪಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ರಾಜ್ಯಪಾಲ ಶ್ರೀ ಮೋಹನ್‌ಲಾಲ್‌ ಸುಖಾಡಿಯಾ ಅವರು ವಿಧಾನ ಮಂಡಲಕ್ಕೆ ತಿಳಿಸಿದರು.

ರಾಜ್ಯಕ್ಕೆ ಬರಬೇಕಾಗಿರುವುದಕ್ಕಿಂತ ಕಡಿಮೆ ನೀರನ್ನು ಪಾಲು ಮಾಡಿರುವ ಕೃಷ್ಣಾ ಜಲ ವಿವಾದ ಪಂಚಾಯ್ತಿಯ ತೀರ್ಪಿನಿಂದ ಯಾವ ರೀತಿಯಲ್ಲಿ ರಾಜ್ಯದ ಆಸಕ್ತಿಯನ್ನು ಕಾಯಲು ಸಾಧ್ಯವೋ ಅಂಥ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.