ADVERTISEMENT

50 ವರ್ಷಗಳ ಹಿಂದೆ: ಗುರುವಾರ 25–11–1971

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:00 IST
Last Updated 24 ನವೆಂಬರ್ 2021, 20:00 IST
   

ಮೊದಲ ಹೊಡೆತಕ್ಕೇ ಹದಿಮೂರು ಪಾಕಿಸ್ತಾನಿ ಟ್ಯಾಂಕುಗಳು ಧ್ವಂಸ

ನವದೆಹಲಿ, ನ. 24– ಭಾರತದ ಪೂರ್ವ ಗಡಿಯಿಂದ ಐದು ಮೈಲಿ ದೂರದಲ್ಲಿ ಬೋಯ್ರಾ ಬಳಿ ನ. 21ರಂದು ಸಂಭವಿಸಿದ ಹಣಾಹಣಿ ಹೋರಾಟದಲ್ಲಿ ಭಾರತೀಯ ಸೇನಾ ಪಡೆಗಳು, ಅತಿಕ್ರಮಿಸಿಬಂದಿದ್ದ ಪಾಕಿಸ್ತಾನದ 13 ಟ್ಯಾಂಕುಗಳನ್ನು ಧ್ವಂಸ ಮಾಡಿದವು ಎಂದು ಇಂದು ಲೋಕಸಭೆಯಲ್ಲಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರು ಪ್ರಕಟಿಸಿದರು.

ಸಾಧುಗಳಿಂದ ಗೂಢಚರ್ಯೆ ವಿರುದ್ಧ ಸರ್ಕಾರಕ್ಕೆ ಎಚ್ಚರಿಕೆ

ADVERTISEMENT

ನವದೆಹಲಿ, ನ. 24– ಯೋಗಿಗಳು ಮತ್ತು ಗುರುಗಳು ರಾಷ್ಟ್ರದಲ್ಲಿ ನಡೆಸುತ್ತಿರುವ ಗೂಢಚರ್ಯೆ ಚಟುವಟಿಕೆಗಳ ವಿರುದ್ಧ ಇಂದು ರಾಜ್ಯಸಭೆಯಲ್ಲಿ ಅನೇಕ ಸದಸ್ಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಅವರಿಗೆ ಹಣದ ಸೌಲಭ್ಯ ನೀಡುತ್ತಿರುವ ಮೂಲಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಇನ್ನೂ ಕೆಲವರು ಸಲಹೆ ಮಾಡಿದರು. ಇದಕ್ಕೆ ಒಲವು ವ್ಯಕ್ತಪಡಿಸಿದ ಗೃಹ ಶಾಖೆ ರಾಜ್ಯ ಸಚಿವ ಕೆ.ಸಿ. ಪಂತ್ ಅವರು, ಚಾಣಕ್ಯನ ಕಾಲದಿಂದಲೂ ಬೇಹುಗಾರಿಕೆಗಾಗಿ ಸಾಧುಗಳನ್ನು ಬಳಸಿಕೊಳ್ಳುತ್ತಿರುವ ಉದಾಹರಣೆ ನೀಡಿದರು.

ಸಾಧುಗಳಲ್ಲಿ ಕೆಲವರು ಒಳ್ಳೆಯವರೂ, ಕೆಲವರು ಕೆಟ್ಟವರೂ ಇರುವುದರಿಂದ ಒಟ್ಟಾರೆ ಕಟುಟೀಕೆ ಸಲ್ಲದೆಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.