ADVERTISEMENT

50 ವರ್ಷಗಳ ಹಿಂದೆ: ಗುರುವಾರ, 24-5-1973

ಪ್ರಜಾವಾಣಿ ವಿಶೇಷ
Published 23 ಮೇ 2023, 23:09 IST
Last Updated 23 ಮೇ 2023, 23:09 IST
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ:ಶುಕ್ರವಾರ, 5–1–1973
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ:ಶುಕ್ರವಾರ, 5–1–1973   

ಪೊಲೀಸರ ಬಂಡಾಯ ಅಡಗಿಸಲು ಕೇಂದ್ರ ಮೀಸಲು ಪಡೆ ರವಾನೆ

ನವದೆಹಲಿ, ಮೇ 23– ಉತ್ತರಪ್ರದೇಶ
ದಲ್ಲಿ ಪ್ರಾಂತೀಯ ಸಶಸ್ತ್ರ ಮೀಸಲು ಸಿಬ್ಬಂದಿ ದಂಗೆಯೆದ್ದಿರುವ ಗಲಭೆಪೀಡಿತ ಕೇಂದ್ರಗಳಿಗೆ ಕೇಂದ್ರ ಮೀಸಲು ಪಡೆಯ ಕೆಲವು ತುಕಡಿಗಳನ್ನು ಕೂಡಲೇ ರವಾನಿಸಲು ಸಜ್ಜುಗೊಳಿಸಲಾಗುತ್ತಿದೆ.

ರಕ್ಷಣಾ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಕಾರ್ಯದರ್ಶಿ ಗೋವಿಂದ ನಾರಾಯಣ್‌ ಈಗಾಗಲೇ ಲಖನೌದಲ್ಲಿದ್ದು, ಸಶಸ್ತ್ರ ಪೊಲೀಸ್‌ ಸಿಬ್ಬಂದಿಯ ಒಂದು ವರ್ಗ ಆರಂಭಿಸಿದ ದಂಗೆಯನ್ನು ಅಡಗಿಸಲು ಸೇನೆ, ಪೊಲೀಸ್‌ ಮತ್ತು ಪೌರಾಡಳಿತದ ಪ‍್ರಯತ್ನಗಳನ್ನು ಸಮನ್ವಯಗೊಳಿಸುತ್ತಿರುವರು.

ADVERTISEMENT

ಇಂದು ಸಂಜೆ ವೇಳೆಗೆ, ರಾಜ್ಯದಲ್ಲಿರುವ ಹತ್ತು ಶಸ್ತ್ರಾಗಾರಗಳ ಪೈಕಿ ಐದು ಶಸ್ತ್ರಾಗಾರಗಳು ಇನ್ನೂ ಪ್ರಾಂತೀಯ ಸಶಸ್ತ್ರ ಪೊಲೀಸ್‌ ಬಂಡುಗಾರರ ವಶದಲ್ಲಿದ್ದವು.‌

ದತ್‌ ಆಯೋಗದ ವರದಿ ಸಲ್ಲಿಕೆ

ಬೆಂಗಳೂರು, ಮೇ 23– ಭದ್ರಾವತಿಯಲ್ಲಿರುವ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಯ ಕುರಿತು ಪರಿಶೀಲಿಸಲು ಏಕಸದಸ್ಯ ಆಯೋಗವಾಗಿ ನೇಮಕಗೊಂಡಿದ್ದ ಶ್ರೀ ಆರ್‌.ಸಿ. ದತ್‌ ಅವರು ತಮ್ಮ ವರದಿಯನ್ನು ಇಂದು ಇಲ್ಲಿ ರಾಜ್ಯ ಸರ್ಕಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.