ADVERTISEMENT

50 ವರ್ಷಗಳ ಹಿಂದೆ: ‘ಕಷ್ಟದಲ್ಲೇ ಸುಖಿಸಿದ’ ಪ್ರಾಜ್ಞ ಡಿ.ವಿ.ಜಿ.ಗೆ ಭಕ್ತಿ ಪ್ರಣಾಮ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 23:49 IST
Last Updated 14 ಫೆಬ್ರುವರಿ 2024, 23:49 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

‘ಕಷ್ಟದಲ್ಲೇ ಸುಖಿಸಿದ’ ಪ್ರಾಜ್ಞ ಡಿ.ವಿ.ಜಿ.ಗೆ ಭಕ್ತಿ ಪ್ರಣಾಮ

ಬೆಂಗಳೂರು, ಫೆ. 14– ಕರ್ನಾಟಕದ ಪತ್ರಕರ್ತರ ಭಕ್ತಿ– ಗೌರವ ಹಾಗೂ ಕೃತಜ್ಞತೆಯ ಸಂಕೇತ.

ಆ ಕೂಟ, ಅವರ ಮನೆಯಲ್ಲೇ, ಅವರ ಮುಂದೆಯೇ ನೆರೆದಿತ್ತು, ಕುಳಿತಿತ್ತು.

ADVERTISEMENT

‘ಭರತಖಂಡದಲ್ಲಿ ಬೆರಳೆಣಿಕೆಯಷ್ಟಿರುವ ಬುದ್ಧಿಜೀವಿಗಳ ಅಗ್ರಪಂಕ್ತಿಯಲ್ಲಿರುವ ಹಿರಿಯರೊಬ್ಬರಿಗೆ ಪದ್ಮಭೂಷಣ ಪ್ರಶಸ್ತಿ. ಈ ಹಿನ್ನೆಲೆಯಲ್ಲಿ, ಡಿ.ವಿ.ಜಿ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗುರುವಾರ ಸನ್ಮಾನಿಸಿತು.

‘ಪ್ರಭುತ್ವದವರು ನಿಮ್ಮ ಹಿರಿಮೆಗರಿಮೆಗಳನ್ನು ತಡವಾಗಿಯಾದರೂ ಗುರುತಿಸಿದರಲ್ಲ’ ಎಂಬ ಸಮಾಧಾನದಿಂದ ‘ಪುಲಕಿತಗೊಂಡ’ ನಾಡಿನ ಸಮಗ್ರ ಪತ್ರಕರ್ತರ ಪರವಾಗಿ ಪತ್ರಕರ್ತರ ಸಂಘದ ಸ್ಥಾಪಕ– ಅಧ್ಯಕ್ಷರಿಗೆ ಕೃತಜ್ಞತೆಯಿಂದ ನಮಸ್ಕಾರ. 

ಎಂಬತ್ತೆರಡು ವಯಸ್ಸಿನ ಡಿ.ವಿ.ಜಿ ಮೇಲಿಂದಮೇಲೆ ಭಾವಪರವಶವಾದರು, ಚೇತರಿಸಿಕೊಂಡರು.

‘ಇದೊಂದು ಸೇವಾವೃತ್ತಿ, ಸಮಾಜಸೇವಾ ಕಾರ್ಯ. ಸತ್ಯ, ಧರ್ಮ, ನಿರ್ಭೀತಿ, ಸರ್ವಸಮತಾ ಭಾವನೆ’ ಮರೆಯಬೇಡಿ ಎಂದರು ಪತ್ರಕರ್ತರಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.