50 ವರ್ಷಗಳ ಹಿಂದೆ
ರಾಜ್ಯಗಳ ನಾಯಕತ್ವ ಬದಲಾವಣೆ ಇಲ್ಲ: ಹೈಕಮಾಂಡ್ ನಿರ್ಧಾರ
ನವದೆಹಲಿ, ಮೇ 13– ಮುಂದಿನ ವರ್ಷದ ಆದಿಯಲ್ಲಿ ಲೋಕಸಭೆ ಚುನಾವಣೆ ನಡೆಯುವ ತನಕ ಯಾವುದೇ ರಾಜ್ಯ ಸರ್ಕಾರದ
ನಾಯಕತ್ವದಲ್ಲಿ ಬದಲಾವಣೆ ಮಾಡಕೂಡದು ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿರು ವುದಾಗಿ ಗೊತ್ತಾಗಿದೆ.
ಯಾವೊಂದು ಗುಂಪಿನ ನಾಯಕರಾಗದೆ, ಪಕ್ಷದ ನಾಯಕರಾಗಿ ವರ್ತಿಸಿ ಎಂದು ಎಚ್.ಎನ್. ಬಹುಗುಣ ಅವರಿಗೆ ಸಲಹೆ ಮಾಡಿ, ಉತ್ತರ ಪ್ರದೇಶದ ಬಿಕ್ಕಟ್ಟನ್ನು ಪ್ರಧಾನಿ ಅವರು ನಿನ್ನೆ ಶಾಂತಗೊಳಿಸಿದ್ದೇ ಸರ್ಕಾರದ ಈ ನೀತಿಯನ್ನು ವ್ಯಕ್ತಪಡಿಸಿತು.
ಕರ್ನಾಟಕ ಮುಖ್ಯಮಂತ್ರಿ ದೇವರಾಜ ಅರಸು ಅವರ ಬೆಂಬಲಿಗರು ಎನ್ನಲಾದ ಏಳು ಮಂದಿ ಕಾಂಗ್ರೆಸ್ಸಿಗರು ಇಂದು ಪ್ರಧಾನಿ ಅವರನ್ನು ಭೇಟಿ ಮಾಡಿದ ಮೇಲೆ ಸರ್ಕಾರದ ಈ ನೀತಿ ಮತ್ತಷ್ಟು ಖಚಿತಪಟ್ಟಿತು.
ಪ್ರಧಾನಿ ಅವರನ್ನು ಭೇಟಿ ಮಾಡಿದವರು ಜಾಫರ್ ಷರೀಫ್, ಎಚ್.ಎಸ್. ನರಸಯ್ಯ, ಮಕ್ಸೂದ್ ಅಲಿ ಖಾನ್, ಜಿ.ವೈ. ಕೃಷ್ಣನ್, ಮಾರ್ಗರೆಟ್ ಆಳ್ವಾ, ಬಿ. ರಾಚಯ್ಯ ಮತ್ತು ಸಿದ್ದರಾಮರೆಡ್ಡಿ.
ಕರ್ನಾಟಕದ ನಾಯಕತ್ವದಲ್ಲಿ ಬದಲಾವಣೆ ಆಗಬೇಕೆಂಬ ರಾಜ್ಯದ ಎಂ.ಪಿ.ಗಳ ಒತ್ತಾಯವನ್ನು ಪ್ರಧಾನಿ ಜತೆ ಅವರು ಪ್ರಸ್ತಾಪಿಸಿದರು.
ನಾನಾ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗದಲ್ಲಿ ಕಾಲ–ಕಾಲಕ್ಕೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಆದರೆ, ಪಕ್ಷವು ಅದನ್ನು ಚರ್ಚೆ ಹಾಗೂ ಒಗ್ಗಟ್ಟಿನ ಮೂಲಕ ಬಗೆಹರಿಸಬೇಕು ಎಂದೂ ಪ್ರಧಾನಿ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.