ADVERTISEMENT

ಮಂಗಳವಾರ, 25–11–1969

ಮಂಗಳವಾರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 20:23 IST
Last Updated 24 ನವೆಂಬರ್ 2019, 20:23 IST

ದೆಹಲಿ ಸೌಧಗಳು ಸಮಾಜವಾದದ ಸಂಕೇತವಲ್ಲ: ಬಾದಷಾ ಬಿಚ್ಚುಮಾತು

ನವದೆಹಲಿ, ನ. 24– ‘ರಾಜಧಾನಿಯಲ್ಲಿ ಹಲವು ಮಹಡಿಗಳು, ಸೌಧಗಳು; ಬಡಹಳ್ಳಿಗರ ಮನೆಯಲ್ಲಿ ಒಂದು ದೀಪಕ್ಕೂ ಗತಿ ಇಲ್ಲ. ಇದು ಸಮಾಜವಾದ ಅಲ್ಲ. ಸಮಾಜವಾದವೆಂದರೆ ಕೆಲಮಂದಿಗೆ ಅರಮನೆಗಳಲ್ಲ, ಬಡವರ ಕಷ್ಟದುಃಖಗಳನ್ನು ಹಂಚಿಕೊಳ್ಳುವುದು’.

ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಇಂದು ಸಂಜೆ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಖಾನ್ ಅಬ್ದುಲ್ ಗಫಾರ್ ಖಾನ್ ಮಾಡಿದ ಭಾಷಣದ ತಿರುಳು ಇದು. ಸರ್ಕಾರದ ನಿಲುವಿನಲ್ಲಿ, ಸಮಾಜದ ಸ್ಥಿತಿಗತಿಯಲ್ಲಿ ಮೂಡಿಬಾರದ ಸಮಾಜವಾದ ಖಾಲಿ ಘೋಷಣೆ ಎಂದು ಅವರು ಹೇಳಿದರು.

ADVERTISEMENT

ಇಂದಿರಾ: 007

ಮದ್ರಾಸ್, ನ. 24– ನವೆಂಬರ್ ಒಂದರಂದು ರಾತ್ರಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ‘ರಾಜಕೀಯ ಕಾರ್ಯಾರ್ಥವಾಗಿ’ ಮದ್ರಾಸಿಗೆ ವಿಮಾನದಲ್ಲಿ ಬಂದಿದ್ದರೆಂದೂ, ತಮಿಳುನಾಡು ಮುಖ್ಯಮಂತ್ರಿ
ಶ್ರೀ ಎಂ. ಕರುಣಾನಿಧಿ ಅವರನ್ನೂ ಕೆಲವು ಮಂದಿ ಕಾಂಗ್ರೆಸ್ಸಿಗರನ್ನೂ ಅವರು ಭೇಟಿ ಮಾಡಿದ್ದರೆಂದೂ ಶ್ರೀಮತಿ ತಾರಕೇಶ್ವರಿ ಸಿನ್ಹ ಅವರು ಇಂದು ಆಪಾದಿಸಿದರು.

‘ಈ ಎಲ್ಲ ವಿಷಯವನ್ನೂ ರಹಸ್ಯವಾಗಿ ಇಡಲಾಗಿದೆ. ಇದನ್ನು 007 ರಹಸ್ಯ ಕಾರ್ಯಾಚರಣೆ ಎಂದು ನಾನು ಕರೆಯುತ್ತೇನೆ’ ಎಂದು ವಾರ್ತಾಗೋಷ್ಠಿಯಲ್ಲಿ ನಗುವಿನ ನಡುವೆ ನುಡಿದರು ಶ್ರೀಮತಿ ಸಿನ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.