ಡಾ. ಮಹಿಷಿಗೆ ಸ್ಟೇಟ್ ಸಚಿವ ಸ್ಥಾನಕ್ಕೆ ಬಡ್ತಿ: ಶಂಕರಾನಂದ್, ಮೊಹಿಸಿನ್ ಉಪ ಸಚಿವರು
ನವದೆಹಲಿ, ಮೇ 2– ಕೇಂದ್ರದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಉಪಸಚಿವೆಯಾಗಿದ್ದ ಡಾ. ಸರೋಜಿನಿ ಮಹಿಷಿ ಅವರಿಗೆ ಸ್ಟೇಟ್ ಸಚಿವ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ.
ಮೈಸೂರಿನ ಶ್ರೀ ಬಿ.ಶಂಕರಾನಂದ್ ಮತ್ತು ಶ್ರೀ ಎಫ್.ಎಚ್.ಮೊಹಿಸಿನ್ ಅವರೂ ಸೇರಿ ಒಟ್ಟು 18 ಮಂದಿ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇವರಿಬ್ಬರಿಗೂ ಉಪಸಚಿವರ ಹುದ್ದೆ ನೀಡಲಾಗಿದೆ.
ವ್ಯವಸಾಯದಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಮೂರು ಅಧ್ಯಯನ ತಂಡಗಳ ಪ್ರವಾಸ
ನವದೆಹಲಿ, ಮೇ 2– ಕೃಷಿ ದೃಷ್ಟಿಯಿಂದ ದೇಶದಲ್ಲಿ ಹಿಂದುಳಿದಿರುವ ಪ್ರದೇಶಗಳಲ್ಲಿ ಪ್ರವಾಸ ನಡೆಸಿ, ವ್ಯವಸಾಯ ಅಭಿವೃದ್ಧಿ
ಯಲ್ಲಿನ ಅಸಮತೆಯನ್ನು ಹೋಗಲಾಡಿಸಲು ಪರಿಹಾರ ಸೂಚಿಸುವಂತೆ ಕಿಸಾನ್ ಸಂಸತ್ ಸದಸ್ಯರನ್ನೊಳಗೊಂಡ ಮೂರು ಅಧ್ಯಯನ ತಂಡಗಳನ್ನು ಆಯ್ಕೆ ಮಾಡಲಾಗಿದೆ.ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರೈತ ವಿಭಾಗ ಈ ನಿರ್ಧಾರ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.