ADVERTISEMENT

50 ವರ್ಷಗಳ ಹಿಂದೆ: ಶನಿವಾರ, 1-5-1971

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 21:56 IST
Last Updated 30 ಏಪ್ರಿಲ್ 2021, 21:56 IST
   

ಮತ್ತೆ 51 ವಸ್ತುಗಳ ಆಮದು ವ್ಯಾಪಾರ ಸರ್ಕಾರದ ವಶಕ್ಕೆ
ನವದೆಹಲಿ, ಏ. 30–
ವರ್ಷಕ್ಕೆ 130 ಕೋಟಿ ರೂ.ಗಳಷ್ಟು ಮೌಲ್ಯದ 51 ವಸ್ತುಗಳ ಆಮದನ್ನು ಸರ್ಕಾರಿ ಸಂಸ್ಥೆಗಳಿಗೆ ವಹಿಸಿಕೊಡಲಾಗುವುದೆಂದು ವಿದೇಶ ವಾಣಿಜ್ಯ ಸಚಿವ ಎಲ್‌.ಎನ್‌.ಮಿಶ್ರಾ ಇಂದು ಪ್ರಕಟಿಸಿದರು.

ಕನ್ನಡಕ್ಕೆ ಶಾಸನಗಳ ಭಾಷಾಂತರ
ಬೆಂಗಳೂರು, ಏ. 30–
ಈಚೆಗೆ ಪುನರ್‌ರಚಿಸಲಾದ ಅಧಿಕೃತ ಭಾಷಾ (ಶಾಸನಗಳಿಗೆ ಸಂಬಂಧಿಸಿದ್ದು) ಆಯೋಗವು ಭಾಷಾ ನೀತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ಮಾಡುವುದರ ಜೊತೆಗೆ ಶಾಸನಗಳನ್ನು ಕನ್ನಡಕ್ಕೆ ಭಾಷಾಂತರಿಸುವ ವಿಷಯವನ್ನೂ ನೋಡಿಕೊಳ್ಳುವುದೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ವರದಿಗಾರರಿಗೆ ತಿಳಿಸಿದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶ್ರೀ ಕೆ.ಆರ್‌.ಗೋಪಿವಲ್ಲಭ ಅಯ್ಯಂಗಾರ್‌ ಅವರು ಸಮಿತಿಯ ಅಧ್ಯಕ್ಷರು. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಶ್ರೀ ಎಂ.ಪಿ.ಎಲ್‌. ಶಾಸ್ತ್ರಿ, ವಿಧಾನ ಮಂಡಲದ ನಿವೃತ್ತ ಕಾರ್ಯದರ್ಶಿ ಶ್ರೀ ಜಿ.ಎಸ್‌.ವೆಂಕಟರಮಣ ಅಯ್ಯರ್‌ ಸದಸ್ಯರು.

ADVERTISEMENT

ಐದು ದಿನಗಳ ವಾರ- ಎಚ್ಚರದ ಪರಿಶೀಲನೆ
ಬೆಂಗಳೂರು, ಏ. 30
– ಸರ್ಕಾರಿ ಕಚೇರಿಗಳಿಗೆ ವಾರಕ್ಕೆ ಎರಡು ದಿನ ರಜ ಕೊಟ್ಟು ಕಚೇರಿಯ ಕಾಲವನ್ನು ಬದಲಾಯಿಸುವ ಬಗ್ಗೆ ಸಾರ್ವಜನಿಕಾಭಿಪ್ರಾಯ ಭಿನ್ನವಾಗಿರುವುದರಿಂದ ಈ ವಿಷಯದಲ್ಲಿ ಎಚ್ಚರಿಕೆಯ ಪರಿಶೀಲನೆ ಅಗತ್ಯವಾಗಿದೆಯೆಂದು ರಾಜ್ಯಪಾಲ ಶ್ರೀ ಧರ್ಮವೀರರವರು ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.