ADVERTISEMENT

50 ವರ್ಷಗಳ ಹಿಂದೆ| ಭಾನುವಾರ, 18–1–1970

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 20:00 IST
Last Updated 17 ಜನವರಿ 2020, 20:00 IST

‌‘ಆಸ್ತಿ ಹಕ್ಕು ಕಸಿವ ಫ್ಯಾಸಿಸಂ ಪ್ರವೃತ್ತಿ’ ವಿರುದ್ಧ ಎಸ್ಸೆನ್ ಎಚ್ಚರಿಕೆ

ಬೆಂಗಳೂರು, ಜ. 17– ಭಾರತದ ಜನತೆ ಮಾನವ ಹಕ್ಕುಗಳನ್ನು ಕಳೆದುಕೊಂಡು ‘ನಾಯಿ ನರಿಗಳಂತೆ’ ಬಾಳಬೇಕಾದ ಕಾಲ ಬರುತ್ತಿದೆಯೆಂಬ ‘ದುಗುಡ, ಭೀತಿ, ಅನುಮಾನವನ್ನು’ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ವ್ಯಕ್ತಪಡಿಸಿದರು.

ಆಸ್ತಿ ಹಕ್ಕನ್ನು ಕಿತ್ತುಹಾಕಬೇಕೆಂಬ ಕೆಲವರ ವಾದವನ್ನು ಪ್ರಸ್ತಾಪಿಸಿ ‘30–40 ವರ್ಷಗಳ ಹಿಂದೆ ರಷ್ಯಾದಲ್ಲಿ ಮಾಡಿದ್ದನ್ನು ನಮ್ಮಲ್ಲಿ ಕೆಲವರು ಈಗ ಮಾಡಲು ಹೊರಟಿದ್ದಾರೆ. ರಾಜ್ಯಾಂಗಕ್ಕೆ ತಿಲಾಂಜಲಿಯನ್ನಿತ್ತು ಆಸ್ತಿ ಹಕ್ಕನ್ನು ಕಸಿಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಎಚ್ಚರಿಸಿದರು.

ADVERTISEMENT

ಚಂಡೀಗಡ ವಿಭಜಿಸಿದರೆಉಗ್ರ‍ಪ್ರತಿಭಟನೆ: ಪಂಜಾಬಿನ ಸರ್ವಪಕ್ಷ ಸಮಿತಿ ಎಚ್ಚರಿಕೆ

ನವದೆಹಲಿ, ಜ. 17– ಚಂಡೀಗಡ ವಿಭಜನೆ ಅಥವಾ ಚಂಡೀಗಡಕ್ಕೆ ಬದಲು ಪಂಜಾಬಿ ಮಾತನಾಡುವ ಬೇರೆ ಯಾವುದೇ ಪ್ರದೇಶವನ್ನು ಹರಿಯಾಣಾಕ್ಕೆ ಕೊಡುವ ಕ್ರಮವನ್ನು ರಾಜ್ಯದ ಜನರು ಉಗ್ರವಾಗಿ ಪ್ರತಿಭಟಿಸುವರೆಂದು ಪಂಜಾಬಿನ ಸರ್ವ ಪಕ್ಷಗಳ ಕ್ರಿಯಾ ಸಮಿತಿಯು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಚಂಡೀಗಡ ಕುರಿತ ನಿರ್ಧಾರವನ್ನು ಇನ್ನು ಎರಡು ಮೂರು ದಿನಗಳಲ್ಲೇ ಪ್ರಕಟಿಸ
ಬೇಕೆಂದು ಸಮಿತಿ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.

ಸರ್ಕಾರದ ಈ ವಿಳಂಬದಿಂದ ಚಂಡೀಗಡ ವಿವಾದ ಮತ್ತಷ್ಟು ಜಟಿಲಗೊಂಡು ಪಂಜಾಬ್ ಮತ್ತು ಹರಿಯಾಣಾ ಜನರ ನಡುವೆ ಕಹಿ ಮನೋಭಾವವುಂಟು ಮಾಡಿದೆಯೆಂದು ಸಮಿತಿ ಅಂಗೀಕರಿಸಿರುವ ನಿರ್ಣಯದಲ್ಲಿ ತಿಳಿಸಲಾಗಿದೆ.

ಅಜಯ್–ಬಸು ವಿರಸ ಉಲ್ಬಣ

ಕಲ್ಕತ್ತ, ಜ. 17– ತಮ್ಮ ಇಲಾಖೆಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗಿಲ್ಲವೆಂದು ಮುಖ್ಯಮಂತ್ರಿ ಅಜಯ್ ಮುಖರ್ಜಿ ಮತ್ತು ಉಪ‍ ಮುಖ್ಯಮಂತ್ರಿ ಜ್ಯೋತಿಬಸು ಅವರ ನಡುವಣ ವಿರಸ–ವಿವಾದಗಳು ಮತ್ತಷ್ಟು ತೀವ್ರ ಸ್ವರೂಪ ತಾಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.