ADVERTISEMENT

50 ವರ್ಷಗಳ ಹಿಂದೆ: ಗುರುವಾರ, ಜೂನ್‌ 10, 1971

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 19:30 IST
Last Updated 9 ಜೂನ್ 2021, 19:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಬಿತ್ತನೆ ಬೀಜ ಸಂಸ್ಥೆಯಲ್ಲಿ ಅಪಾರ ಭ್ರಷ್ಟಾಚಾರ: ಸಿಬಿಐ ತನಿಖೆಗೆ ರಾಜ್ಯಸಭೆಯಲ್ಲಿ ಹಟ

ನವದೆಹಲಿ, ಜೂನ್ 9– ಸರ್ಕಾರಿ ವಲಯದ ರಾಷ್ಟ್ರೀಯ ಬಿತ್ತನೆ ಬೀಜ ಕಾರ್ಪೋರೇಷನ್ ವಿರುದ್ಧ ಮಾಡಲಾಗಿರುವ ತೀವ್ರತರ ಭ್ರಷ್ಟಾಚಾರ ಹಾಗೂ ಮೋಸದ ವ್ಯವಹಾರಗಳನ್ನು ಕೇಂದ್ರ ತನಿಖಾ ಮಂಡಳಿ (ಸಿಬಿಐ) ವಿಚಾರಣೆಗೆ ಒಪ್ಪಿಸಬೇಕೆಂದು ರಾಜ್ಯಸಭೆಯ ಎಲ್ಲ ಪಕ್ಷಗಳ ಸದಸ್ಯರು ಇಂದು ಆಗ್ರಹಪಡಿಸಿದರು.

ಕೇಂದ್ರ ತನಿಖಾ ಮಂಡಳಿಯೇ ತನಿಖೆ ನಡೆಸಬೇಕೆಂದು ಪಟ್ಟುಹಿಡಿದು ಕುಳಿತಿದ್ದ ಉದ್ರಿಕ್ತ ಸದಸ್ಯರನ್ನು ಸಾಂತ್ವನಗೊಳಿಸಲು ಕೃಷಿ ಸಚಿವ ಫಕ್ರುದ್ದೀನ್ ಅಲೀ ಅಹ್ಮದ್ ಅವರು ಸೂಚಿಸಿದರು. ಕಾರ್ಪೋರೇಷನ್‌ನ ಡೈರೆಕ್ಟರೂ ಆಗಿರುವ ಸಂಸತ್ ಸದಸ್ಯರೊಬ್ಬರ ಅಧ್ಯಕ್ಷತೆಯ ಸಮಿತಿಯೊಂದರಿಂದ ವಿಚಾರಣೆ ಏರ್ಪಡಿಸಲು ಸಿದ್ಧವೆಂದು ತಿಳಿಸಿ ದ–ಭರವಸೆಯೂ ಫಲಕಾರಿಯಾಗಲಿಲ್ಲ.

ADVERTISEMENT

ನ್ಯಾಯರೀತಿ ವರ್ತನೆ ಇಲ್ಲವೆ ಮತ್ತೆ ಸಕ್ಕರೆ ಬೆಲೆ, ಹಂಚಿಕೆ ಹತೋಟಿ

ನವದೆಹಲಿ, ಜೂನ್ 9–ಸಕ್ಕರೆ ಕೈಗಾರಿಕೆ ಮತ್ತು ವ್ಯಾಪಾರಿಗಳು ನ್ಯಾಯವಾದ ರೀತಿಯಲ್ಲಿ ವರ್ತಿಸದಿರುವುದು ಕಂಡು ಬಂದರೆ ಮತ್ತೆ ಸಕ್ಕರೆ ಬೆಲೆ ಮತ್ತು ಹಂಚಿಕೆ ಯನ್ನು ನಿಯಂತ್ರಿಸಲು ಸರ್ಕಾರ ಹಿಂಜರಿಯುವುದಿಲ್ಲವೆಂದು ಇಲ್ಲಿ ಇಂದು ಸಕ್ಕರೆ ಉದ್ಯಮಕ್ಕೆ ಸ್ಪಷ್ಟಪಡಿಸಲಾಯಿತು.

ಭಾರತೀಯ ಸ್ಕಕರೆ ಕಾರ್ಖಾನೆ ಸಂಘ ವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕೇಂದ್ರ ಕೃಷಿ ಸಚಿವ ಫಕ್ರುದ್ದೀನ್ ಅಲೀ ಅಹ್ಮದ್‌ರವರು ಈ ಎಚ್ಚರಿಕೆ ನೀಡಿದರು.

ಕಬ್ಬಿಗೆ ಕನಿಷ್ಠ ಬೆಲೆ ನಿಗದಿ ಮಾಡು ವಾಗ, ಕಬ್ಬಿನಲ್ಲಿರುವ ಸಕ್ಕರೆ ಅಂಶವನ್ನೇ ಆಧಾರವಾಗಿಟ್ಟುಕೊಳ್ಳಬೇಕೆಂಬ ಸಕ್ಕರೆ ಗಿರಣಿಗಳ ಕೇಳಿಕೆಯನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುವುದೆಂದು ಕೇಂದ್ರ ಕೃಷಿ ಸಚಿವ ಫಕ್ರುದ್ದೀನ್ ಅಲೀ ಅಹ್ಮದ್ ಭರವಸೆ ಇತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.