ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 1–1–1971

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:32 IST
Last Updated 31 ಡಿಸೆಂಬರ್ 2020, 19:32 IST
   

ಹಿಂಸಾಚಾರ ಪ್ರಜಾಸತ್ತೆಗೆ ಸವಾಲು: ಸಮಸ್ಯೆಗಳನ್ನು ಕುರಿತು ಗೋರೆ ವಿಶ್ಲೇಷಣೆ
ಸಾಖರ್‌ವಾಡಿ, ಡಿ. 31–
ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳನ್ನು ಸಂಸದೀಯ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಪರಿಹರಿಸಬೇಕೋ ಅಥವಾ ಹಿಂಸಾ ಮಾರ್ಗದಿಂದಲೋ?

–ಇದು ಹೊಸ ವರ್ಷದಲ್ಲಿ ಕಾಲಿಟ್ಟಿರುವ ದೇಶ ಇಂದು ಎದುರಿಸುತ್ತಿರುವ ಸಮಸ್ಯೆ ಎಂದು ಪ್ರಜಾಸಮಾಜವಾದಿ ಪಕ್ಷದ ಅಧ್ಯಕ್ಷ ಎನ್‌.ಜಿ.ಗೋರೆ ಅವರು ತಿಳಿಸಿದರು.

ಪಿ.ಎಸ್.ಪಿ.ಯ ಮೂರು ದಿನಗಳ 11ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಜಾಧವಪುರ ವಿಶ್ವವಿದ್ಯಾಲಯದ ಉಪಕುಲಪತಿಯನ್ನು ಇರಿದು ಕೊಂದ ಪ್ರಕರಣವು ಪ್ರಜಾಸತ್ತೆಯಲ್ಲಿನ ದೇಶದ ನಂಬಿಕೆಗೆ ಒಡ್ಡಿದ ಸವಾಲು ಎಂದು ಹೇಳಿದರು.

ADVERTISEMENT

ವಿಧಾನಸಭೆ ಚುನಾವಣೆ: ನಾಳೆ ವೀರೇಂದ್ರರ ಚರ್ಚೆ
ಬೆಂಗಳೂರು, ಡಿ. 31–
ಮಧ್ಯಂತರ ಚುನಾವಣೆಯ ಜೊತೆಗೆ ರಾಜ್ಯದ ವಿಧಾನಸಭೆಗೂ ಚುನಾವಣೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್‌ ಅವರು ಶನಿವಾರ ಸಹೋದ್ಯೋಗಿಗಳೊಡನೆ ಸಮಾಲೋಚನೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.