ADVERTISEMENT

50 ವರ್ಷಗಳ ಹಿಂದೆ: ಗುರುವಾರ, ಮಾರ್ಚ್‌ 8, 1973

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 19:30 IST
Last Updated 7 ಮಾರ್ಚ್ 2023, 19:30 IST
   

ಕರಬಾರ ಇಲ್ಲ, ರಾಜ್ಯ ನೌಕರರಿಗೆ ಕೇಂದ್ರ ಭತ್ಯದ ಬಳುವಳಿ
ಬೆಂಗಳೂರು, ಮಾ.7–
ಹೊಸ ಕರಭಾರಗಳಿಲ್ಲದ, 36.14 ಕೋಟಿ ರೂಪಾಯಿಗಳ ಒಟ್ಟು ಕೊರತೆಯ 1973–14ರ ಸಾಲಿನ ಮೈಸೂರು ಮುಂಗಡ ಪತ್ರ, ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಶ್ರೇಣಿಯನ್ನು, ಮುಂದಿನ ತಿಂಗಳಿಂದ ಕೇಂದ್ರ ನೌಕರರ ಮಟ್ಟಿಗೆ ಏರಿಸಿ, ಈಗಾಗಲೇ ಯುಗಾದಿ ಶುಭಾಶಯ ಹೇಳಿದೆ.

ಕ್ಷಾಮ ನಿವಾರಣೆ ಮತ್ತು ಅಭಿವೃದ್ಧಿ ವಿಸ್ತರಣೆಯ ಉಭಯ ಮಾರ್ಗಗಳಲ್ಲಿ ತುರ್ತು ಹಾಗೂ ವಸ್ತುನಿಷ್ಠ ಗುರಿಗಳನ್ನು ಕರಾರುವಾಕ್ಕಾಗಿ ನಮೂದಿಸಿರುವ ಬಜೆಟ್‌, ಎಂಟು ಜಿಲ್ಲೆಗಳಲ್ಲಿ 10.25 ಲಕ್ಷ ಮಂದಿಗೆ ಪರಿಹಾರ ಉದ್ಯೋಗ ಉದ್ಯೋಗ ಒದಗಿಸಲು 15 ಕೋಟಿ ರೂಪಾಯಿಗಳ ಕಾರ್ಯಕ್ರಮವನ್ನು ಪ್ರಕಟಿಸಿದೆ.

ಸರ್ಕಾರಿ ಸಂಸ್ಥೆಯಿಂದಲೇ ಗೊಬ್ಬರದ ಮಾರಟ: ಶಿಂದೆ
ನವದೆಹಲಿ, ಮಾ.7–
ಗೊಬ್ಬರ ಬೆಲೆಯನ್ನು ಕ್ರಮಗೊಳಿಸಲು ಅದರ ಪೂರ್ಣ ಮಾರಟ ವ್ಯವಸ್ಥೆಯನ್ನು ಸರ್ಕಾರಿ ಹಂಚಿಕೆ ಸಂಸ್ಥೆಯ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಕೃಷಿ ಖಾತೆ ಸ್ಟೇಟ್‌ ಸಚಿವ ಶ್ರೀ ಎ.ಪಿ. ಶಿಂಧೆ ಅವರು ಇಂದು ರಾಜ್ಯ ಸಭೆಗೆ ತಿಳಿಸಿದರು.

ADVERTISEMENT

ಈ ವಿಷಯ ಕುರಿತು ತಮ್ಮ ಖಾತೆಯು ಕೇಂದ್ರ ಪೆಟ್ರೋಲಿಯಂ ಖಾತೆ ಜತೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ ಶ್ರೀ ಶಿಂಧೆ ಅವರು ‘ಗೊಬ್ಬರ ತಯಾರಕರು ತಮ್ಮ ತಯಾರಿಕೆಯಲ್ಲಿ ಸ್ವಲ್ಪ ಭಾಗವನ್ನು ಮಾರಾಟ ಮಾಡುವುದಕ್ಕೆ ಈಗ ಇರುವ ರಿಯಾಯ್ತಿಯನ್ನು ಪುನರ್ವಿಮರ್ಶಿಸಲೂ ಉದ್ದೇಶಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.