ADVERTISEMENT

ಭಾನುವಾರ, 27–10–1968

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 20:01 IST
Last Updated 26 ಅಕ್ಟೋಬರ್ 2018, 20:01 IST
   

ಮೈಸೂರು, ಅ. 26– ನಿನ್ನೆ ಕಾರಾಪುರ ಕಾಡಿನಲ್ಲಿ ಆನೆ ಮೇಲೆ ಹೌಡಾದಲ್ಲಿ ಕುಳಿತು ಸಲಗವೊಂದರ ಬೇಟೆಯಾಡುತ್ತಿದ್ದಾಗ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್‌ರವರು ಕೆಳಕ್ಕೆ ಹಾರಿ ಅವರ ಬಲಗಾಲಿನ ಎರಡು ಕಾಲು ಬೆರಳುಗಳ ಮೂಳೆ ಮುರಿದಿದೆ.

ಈ ಸಲಗದಿಂದ ಸಮೀಪದ ಗ್ರಾಮಸ್ಥರಿಗೆ ತುಂಬ ತೊಂದರೆಯಾಗಿತ್ತೆಂದೂ ಮಹಾರಾಜರು ಅದರ ಬೇಟೆಗೆ ಹೋದಾಗ ಅವರು ಕುಳಿತಿದ್ದ ಹೌಡಾದ ಹಗ್ಗದ ಕಟ್ಟುಗಳು ಸಡಿಲಗೊಂಡು ಹೌಡಾವು ವಾಲಿತೆಂದೂ ಆಗ ಅವರು ಕೆಳಕ್ಕೆ ಹಾರಿದರೆಂದು ಗೊತ್ತಾಗಿದೆ.

ಇಂದು ಮಧ್ಯಾಹ್ನ ವೈದ್ಯರು ಅವರ ಕಾಲು ಬೆರಳುಗಳನ್ನು ಪರೀಕ್ಷಿಸಿದರು. ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಅವರ ಎಕ್ಸ್‌ರೇ ತೆಗೆಯಲಾಯಿತು. ನೊಂದ ಕಾಲಿಗೆ ಪ್ಲಾಸ್ಟರ್ ಹಾಕಲಾಗಿದೆ.

ADVERTISEMENT

ಆಸ್ಪತ್ರೆಯಿಂದ ಅವರು ಅರಮನೆಗೆ ಹಿಂತಿರುಗಿದ್ದಾರೆ. ಅವರು ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.