ADVERTISEMENT

75 ವರ್ಷದ ಹಿಂದೆ: ಕಮ್ಯುನಿಸ್ಟರಿಂದ ಪೋಹಾಂಗ್‌ ವ್ಯೂಹ ಛೇದನ

ಗುರುವಾರ 31–8–1950

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 22:51 IST
Last Updated 30 ಆಗಸ್ಟ್ 2025, 22:51 IST
<div class="paragraphs"><p>75 ವರ್ಷಗಳ ಹಿಂದೆ</p></div>

75 ವರ್ಷಗಳ ಹಿಂದೆ

   

ಟೋಕಿಯೊ, ಆಗಸ್ಟ್‌ 30– ಪೂರ್ವತೀರದ ಪೋಹಾಂಗ್‌ ಉತ್ತರದಲ್ಲಿರುವ ದಕ್ಷಿಣ ಕೊರಿಯದ ವ್ಯೂಹದೊಳಕ್ಕೆ ಕಮ್ಯುನಿಸ್ಟರ ‘ಶತಾಯ–ಗತಾಯ’ ಹೋರಾಟದ ದಳವೊಂದು ಈ ರಾತ್ರಿ ಛೇದಿಸಿ ನುಗ್ಗಿದೆ. ಅಮೆರಿಕನ್ನರು ತೀರದಲ್ಲಿರುವ ತಮ್ಮ ಹಡಗುಗಳಿಂದ ತೋಪಿನ ಮಳೆಗರೆದರೂ ಈ ದಳ ಲೆಕ್ಕಿಸದೆ ನುಗ್ಗಿತು. 

 ಈ ಮುಂಚೂಣಿಯ ಹಿಂಬದಿಯಲ್ಲಿ ಕನಿಷ್ಠ ಒಂದಾದರೂ ಕಮ್ಯುನಿಸ್ಟ್‌ ಡಿವಿಜನ್‌ ಇದ್ದು, ಅದು ಪ್ಯೂಸಾನ್‌ ಕಡೆಗೆ ರಭಸದಿಂದ ನುಗ್ಗಬೇಕೆಂಬ ಮಹಾ ಪ್ರಯತ್ನದ ಹೊಂಚು ಹಾಕುತ್ತಿದೆ ಎಂಬುದಾಗಿ ವರದಿಯಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.