
ಪ್ರಜಾವಾಣಿ ವಿಶೇಷ
75 ವರ್ಷಗಳ ಹಿಂದೆ ಈ ದಿನ
ಏರ್ ಇಂಡಿಯಾ ವಿಮಾನದ ಅವಶೇಷ ಪತ್ತೆ
ಜಿನೀವಾ, ನ. 5– ನಲವತ್ತೆಂಟು ಮಂದಿಯನ್ನೊಳಗೊಂಡು, ಶುಕ್ರವಾರದಿಂದ ಕಾಣೆಯಾಗಿದ್ದ ಏರ್ ಇಂಡಿಯಾ ಕಾನ್‌ಸ್ಟಲೇಷನ್‌ನ ‘ಮಲಬಾರ್ ಪ್ರಿನ್ಸೆಸ್’ ವಿಮಾನವು ಇಂದು 15,781 ಅಡಿ ಎತ್ತರದ ಮಾಂಟ್ ಬ್ಲಾಂಕ್ ಶಿಖರದ, 700 ಅಡಿ ಕೆಳಗೆ ಬಿದ್ದುದು ಕಂಡು ಬಂತು.
ಲಂಡನ್ನಿನಲ್ಲಿ ಏರ್ ಇಂಡಿಯಾ ಸಂಸ್ಥೆಯ ಕಾರ್ಯಾಚರಣೆ ನಿರ್ದೇಶಕ ಕ್ಯಾಪ್ಟನ್ ಡಿ.ಕೆ. ಜಾಥಾರ್‌ರವರ ಕಣ್ಣಿಗೆ ಬಿದ್ದ ಈ ವಿಮಾನವು, ಎರಡು ಭಾಗವಾಗಿ ಮುರಿದು ಬಿದ್ದಿತ್ತು. ಯಾರೂ ಜೀವಂತವಾಗಿರುವ ಚಿಹ್ನೆಯೇನೂ ಕಾಣಬರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.