75 ವರ್ಷಗಳ ಹಿಂದೆ
ಬೆಂಗಳೂರು, ಜುಲೈ 8– ವಿದ್ಯುಚ್ಛಕ್ತಿ ಉಪಯೋಗದ ಮೇಲೆ ಯೂನಿಟ್ ಒಂದಕ್ಕೆ 2 ಕಾಸು ತೆರಿಗೆ ವಿಧಿಸಬೇಕೆಂದು ಸರ್ಕಾರ ನಿರ್ಧರಿಸಿ ಕೆಲದಿನಗಳ ಹಿಂದೆ ಜರೂರು ಶಾಸನ ಹೊರಡಿಸಿದೆಯಷ್ಟೆ. ಸದ್ಯಕ್ಕೆ ಸರ್ಕಾರ ಮನೆ ಮತ್ತು ವ್ಯವಸಾಯಕ್ಕೆ ಉಪಯೋಗಿಸುವ ವಿದ್ಯುಚ್ಛಕ್ತಿ ಮೇಲೆ ತೆರಿಗೆ ವಿಧಿಸುವುದಿಲ್ಲವೆಂದೂ ಕೈಗಾರಿಕೆಗಳು ಉಪಯೋಗಿಸುವ ವಿದ್ಯುಚ್ಛಕ್ತಿ ಮೇಲೆ ಮಾತ್ರ ತೆರಿಗೆ ಹಾಕಲಾಗುವುದೆಂದೂ ತಿಳಿದುಬಂದಿದೆ. ಇದರಿಂದ ಸರ್ಕಾರ 10 ಲಕ್ಷ ರೂ ಆದಾಯ ನಿರೀಕ್ಷಿಸಿದೆ.
ಜಮ್‌ಷೆದ್‌ಪುರ, ಜುಲೈ 8– ತಾತಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ 400 ರೂ ಮತ್ತು ಹೆಚ್ಚಿಗೆ ಮೂಲ ಸಂಬಳ ಪಡೆಯುವ ನೌಕರರು 1952ರ ಜುಲೈ 1ರ ಒಳಗಾಗಿ ಹಿಂದಿ ಭಾಷೆಯನ್ನು ಕಲಿಯಬೇಕೆಂದು ಕಾರ್ಖಾನೆ ಆಡಳಿತ ಸೂಚನೆ ಕೊಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.