75 ವರ್ಷಗಳ ಹಿಂದೆ
ಸಂಸ್ಥಾನದ ಆಹಾರ ಪರಿಸ್ಥಿತಿ
ಬೆಂಗಳೂರು, ಆಗಸ್ಟ್ 24– ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರು, ಇಂದು ಅವರ ಕಚೇರಿಯಲ್ಲಿ ಸಂಸ್ಥಾನದ ಆಹಾರ ಪರಿಸ್ಥಿತಿ ಬಗ್ಗೆ ಸಂಸ್ಥಾನದ ಜಿಲ್ಲಾಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು.
ಆಹಾರ ಸಚಿವ ಟಿ. ಮರಿಯಪ್ಪ ಅವರು ಹಾಜರಿದ್ದರು.
ಕಳೆದ ವಾರಾಂತ್ಯದಲ್ಲಿ ದೆಹಲಿಯಲ್ಲಿ ನಡೆದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ದೇಶದ ಆಹಾರ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಮುಖ್ಯಮಂತ್ರಿ ಅವರು, ಆ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತರಬೇಕೆಂದು ತಿಳಿಸಿದರು.
ಸಮಾನ ಪಠ್ಯಭಾಷೆ ಬಗ್ಗೆ ಸಲಹೆ
ನಾಗಪುರ, ಆಗಸ್ಟ್ 24– ಅಂತರ ವಿಶ್ವವಿದ್ಯಾಲಯ ಮಂಡಳಿಯು ವಿಶ್ವವಿದ್ಯಾಲಯ ಸಮಿತಿಯ ವರದಿಯನ್ನು ಅಂಗೀಕರಿಸಿ ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಸಮಾನ ಪಠ್ಯಭಾಷೆಯೊಂದು ಇರುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ.
ಆದರೆ, ಇಂಗ್ಲಿಷಿಗೆ ಬದಲು ಭಾರತೀಯ ಭಾಷೆಯೊಂದನ್ನು ಅನುಸರಿಸುವಾಗ ವಿದ್ಯಾಭ್ಯಾಸಮಟ್ಟ ಮತ್ತು ವಿದ್ಯಾಭ್ಯಾಸ ಪದ್ಧತಿಗೆ ಧಕ್ಕೆ ತಗುಲದಂತೆ ಎಚ್ಚರಿಕೆಯಿಂದಿರುವುದು ಅಗತ್ಯವೆಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.