75 ವರ್ಷಗಳ ಹಿಂದೆ
ದೆಹಲಿಯಲ್ಲಿ ದಶ ಸಹಸ್ರ ಟಾಂಗಾವಾಲಾಗಳ ಮುಷ್ಕರ
ದೆಹಲಿ, ಆಗಸ್ಟ್ 5– ಹುರುಳಿ ಪಡಿತರವನ್ನು ನಿಲ್ಲಿಸಿರುವುದನ್ನೂ ಮತ್ತು ತಮ್ಮ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಬಂಧಿಸಿರುವುದನ್ನೂ ವಿರೋಧಿಸಿ ದೆಹಲಿಯ ಹತ್ತು ಸಹಸ್ರ ಟಾಂಟಾವಾಲಾಗಳೂ, ಕುದುರೆಗಾಡಿ ಓಡಿಸುವವರೂ ಇಂದು ಮೂರು ದಿನಗಳ ಸತ್ಯಾಗ್ರಹ ಆರಂಭಿಸಿದ್ದಾರೆ.
ಪಾರ್ಲಿಮೆಂಟ್ ಭವನದ ಮುಂದೆ ನಿನ್ನೆ ಪ್ರದರ್ಶನ ನಡೆಸಿದುದಕ್ಕಾಗಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಇತರ 43 ಮಂದಿ ಟಾಂಗಾವಾಲಾಗಳನ್ನು ದಸ್ತಗಿರಿ ಮಾಡಲಾಯಿತು.
ಅನ್ನ ಕೇಳಿದವರಿಗೆ ಅಶ್ರುವಾಯು
ಬರ್‌ಹ್ಯಾಂಪುರ, ಆಗಸ್ಟ್ 5– ಅನ್ನ ಬೇಡಿ ಘೋಷಣೆಗಳನ್ನು ಕೂಗುತ್ತ ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿ ಮುಂದೆ ಪ್ರದರ್ಶನ ಮಾಡಿದ 5,000 ಮಂದಿ ಸ್ತ್ರೀ, ಬಾಲರಾದಿಯಾದ ಗುಂಪನ್ನು ಚೆದುರಿಸುವ ಸಲುವಾಗಿ ಪೊಲೀಸರು ಅಶ್ರು ಬಾಂಬ್‌ಗಳನ್ನು ಎಸೆದಾಗ ಹಲವು ಜನ ಮೂರ್ಛೆಗೊಂಡರು. ಆ ನಂತರ ಪೊಲೀಸರು ಲಾಠಿ ಬೀಸಿ 30 ಮಂದಿ ಬಾಲ–ಬಾಲಿಕಿಯರನ್ನು ದಸ್ತಗಿರಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.