
ಪ್ರಜಾವಾಣಿ ವಾರ್ತೆಟಿಬೆಟ್ ಆಕ್ರಮಣ ನ್ಯಾಯಬಾಹಿರ
ನವದೆಹಲಿ, ನ. 3– ಟಿಬೆಟ್ ಸಮಸ್ಯೆಯ ಬಗ್ಗೆ ಭಾರತಕ್ಕೂ, ಚೀಣಕ್ಕೂ ನಡೆದ ರಾಜತಾಂತ್ರಿಕ ಪತ್ರ ವ್ಯವಹಾರದ ವಿವರಗಳನ್ನು ಇಂದು ಇಲ್ಲಿ ಪ್ರಕಟಿಸಲಾಯಿತು.
ಅಕ್ಟೋಬರ್ 31ರಂದು ಚೀಣಕ್ಕೆ ಭಾರತ ಕಳುಹಿಸಿದ ಕೊನೆಯ ಪತ್ರದಲ್ಲಿ ‘ಅತ್ಯಾಶ್ವರ್ಯ’ವನ್ನು ಸೂಚಿಸಿ, ಟಿಬೆಟ್ ವಿರುದ್ಧವಾಗಿ ಮಿಲಿಟರಿ ಕಾರ್ಯಾಚರಣೆ ನಡೆಸುವ ಅವಶ್ಯಕತೆ ಇರಲಿಲ್ಲವೆಂದು ತಿಳಿಸಲಾಗಿದೆ.
ಈ ಪರಿಸ್ಥಿತಿಯ ಸಲುವಾಗಿ ಚೀಣ ತನ್ನ ಪಡೆಗಳ ಮುನ್ನೋಟವನ್ನು ತಡೆದು ಶಾಂತಿಯುತ ಸಂಧಾನಗಳಿಗೆ ಅನುಕೂಲ ಮಾಡದಿದ್ದರೆ, ಪೀಕಿಂಗಿಗೆ ಹೊರಟಿರುವ ಟಿಬೆಟ್ಟಿನ ನಿಯೋಗಕ್ಕೆ ಭಾರತ ಸರ್ಕಾರ ಸಲಹೆ ನೀಡಲಾರದೆಂದು ಪತ್ರದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.