75 ವರ್ಷಗಳ ಹಿಂದೆ
ಪೊಲೀಸರ ಲಾಠಿ ಪ್ರಹಾರ; ಮೂವರಿಗೆ ಗಾಯ
ಮುಂಬಯಿ, ಸೆಪ್ಟೆಂಬರ್ 8– ಇಲ್ಲಿನ ಕಾಮ್‌ಗಾರ್ ಮೈದಾನದಲ್ಲಿ ಘರ್ಷಣೆಯಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರ ಹಾಗೂ ಗುಂಡಿನ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದರು.
ಗ್ರೇಟರ್ ಬೊಂಬಾಯಿ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಸಭೆ
ಮತ್ತು ಮೆರವಣಿಗೆ ನಡೆಸದಂತೆ ಪೊಲೀಸ್ ಆಯುಕ್ತರು ನಿರ್ಬಂಧ ಹೇರಿದ್ದರು. ಈ ನಡುವೆಯೂ ಮಜ್ದೂರ್ ಸಭಾವು ಕಾಮ್‌ಗಾರ್ ಮೈದಾನದಲ್ಲಿ ಬೃಹತ್ ಸಭೆ ಹಮ್ಮಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.