ಬೆಂಗಳೂರು, ಅ. 10– ದಸರಾ ನೋಡಲು ಮೈಸೂರು ನಗರಕ್ಕೆ ಬರುವವರಿಗೆ ರೇಷನ್ ಕೊಡುವುದಿಲ್ಲ ಎಂದು ಸರ್ಕಾರ ಪ್ರಕಟಿಸಿದೆ.
ಈ ಸಂಬಂಧದಲ್ಲಿ ಇಂದು ಹೊರಟ ಸರ್ಕಾರಿ ಪ್ರಕಟಣೆ, ಈ ವರ್ಷ ಸಂಸ್ಥಾನದಲ್ಲಿ ಉಂಟಾಗಿರುವ ಉತ್ಕಟ ಆಹಾರ ಪರಿಸ್ಥಿತಿ ಹಾಗೂ ಎಂದಿನ ಸಾಮಾನ್ಯ ರೇಷನ್ ಪ್ರಮಾಣ ಒದಗಿಸಲು ಕಷ್ಟವಾಗಿರುವುದರಿಂದ ಅಕ್ಟೋಬರ್ 12ರಿಂದ ಮೈಸೂರಿನಲ್ಲಿ ಆರಂಭವಾಗುವ ದಸರಾಗೆ ಬರುವ ವರಿಗೆ ಆಹಾರ ಧಾನ್ಯ ಒದಗಿಸಲು ಸಾಧ್ಯವೇ ಇಲ್ಲವೆಂದು ತಿಳಿಸಿದೆ.
ಮದರಾಸು, ಅ. 10– ಕೇಂದ್ರ ಶಾಸನದ ಮೂಲಕ ಅಥವಾ ವಿಶೇಷಾಜ್ಞೆಗಳ ಮೂಲಕ ಭಾರಿ ಕಾಳಸಂತೆಕೋರರನ್ನೂ, ಅಕ್ರಮ ದಾಸ್ತಾನುಗಾರರನ್ನೂ ಹಾಗೂ ಅಧಿಕ ಲಾಭ ಪಡೆಯುವವರನ್ನು ಬಂಧಿಸಲು ಅಧಿಕಾರ ಪ್ರಯೋಗಿಸಬೇಕೆಂದು ಭಾರತ ಸರ್ಕಾರ ಸಲಹೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.