
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಮುಂಬಯಿ, ಫೆ. 12– ಬೇಗನೇ ಭಾರತ ಮತ್ತು ಪಾಕಿಸ್ತಾನದ ನಡುವಣ ವ್ಯಾಪಾರ ಪುನಃ ಆರಂಭವಾಗುವ ನಿರೀಕ್ಷೆ ತಮಗಿದೆ ಎಂದು ಕೇಂದ್ರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಶ್ರೀ ಹರೆ ಕೃಷ್ಣ ಮೆಹತಾ ಅವರು ಈ ದಿನ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
ಹಾಗಾದಲ್ಲಿ ಭಾರತದ ಬಟ್ಟೆ ಕೈಗಾರಿಕೆಗೆ ಬೇಕಾದ ಒಂದೆರಡು ಲಕ್ಷ ಟನ್‌ಗಳಷ್ಟು ಹತ್ತಿ ಪಾಕಿಸ್ತಾನದಿಂದ ಬರುವ ನಿರೀಕ್ಷೆ ಇದೆಯೆಂದೂ ಅವರು ತಿಳಿಸಿದರು.
ದೇಶದಲ್ಲಿ ಬೆಲೆಗಳು ಒಂದೇ ಸಮನಾಗಿದ್ದರೂ ಅದರಿಂದ ಕೈಗಾರಿಕೆಗೆ ತೊಂದರೆಯಾಗದಂತೆ ಬಟ್ಟೆಯ ಬೆಲೆಯನ್ನು ಸ್ಥಿಮಿತದಲ್ಲಿ ಇಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.