
ಪ್ರಜಾವಾಣಿ ವಿಶೇಷ
75 ವರ್ಷಗಳ ಹಿಂದೆ ಈ ದಿನ
ನವದೆಹಲಿ, ನ. 26– ಭಾರತ ಪಾರ್ಲಿಮೆಂಟ್ ಸಭಾಧ್ಯಕ್ಷರಾದ ಜಿ.ವಿ. ಮಾವಳಣಕರರು ಸದಸ್ಯರಿಗೆ ಇಂದು ಜ್ಞಾಪಿಸಿದ ಸಭೆಯ ಸಂಪ್ರದಾಯಗಳು ಈ ರೀತಿ ಇವೆ:
ಸಭಾಧ್ಯಕ್ಷರು ಎದ್ದು ನಿಂತಿರುವಾಗ ಮೊದಲನೆಯದಾಗಿ ಯಾವ ಸದಸ್ಯರೇ ಆಗಲಿ ಓಡಾಡಕೂಡದು ಅಥವಾ ಎದ್ದುನಿಲ್ಲಕೂಡದು. ಎರಡನೆಯದಾಗಿ ಯಾವೊಬ್ಬ ಸದಸ್ಯರೇ ಆಗಲಿ ಎದ್ದು ನಿಂತು ಮಾತನಾಡುತ್ತಿರುವಾಗ ಒಬ್ಬರಿಗೂ ಮತ್ತೊಬ್ಬರಿಗೂ ನಡುವೆ ಸರಾಗವಾಗಿ ಅಡ್ಡ ಹಾಯಬಾರದು. ಮೂರನೆಯದಾಗಿ ಸದಸ್ಯರು ತಂತಮ್ಮನ್ನೇ ಉದ್ದೇಶಿಸಿ ಮಾತನಾಡುವ ಬದಲು ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.