ADVERTISEMENT

75 ವರ್ಷಗಳ ಹಿಂದೆ | ಕಾಲ ಮಿಂಚುವ ಮುನ್ನವೆ ಎಚ್ಚೆತ್ತುಕೊಳ್ಳಿ: ನೆಹರೂ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 23:23 IST
Last Updated 31 ಜನವರಿ 2026, 23:23 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ಕಾಲ ಮಿಂಚುವ ಮುನ್ನವೆ ಎಚ್ಚೆತ್ತುಕೊಳ್ಳಿ: ನೆಹರೂ

ಅಹ್ಮದಾಬಾದ್‌, ಜ. 30– ‘ವೇಗದಿಂದ ಕಾಂಗ್ರೆಸ್ಸಿನ ಸತ್ವ ಕರಗಿಹೋಗುತ್ತಿದೆ, ಕಾಲ ಮೀರುವ ಮುನ್ನವೇ ಕಾಂಗ್ರೆಸ್ಸಿಗರು ಎಚ್ಚೆತ್ತುಕೊಳ್ಳಬೇಕಾದದ್ದು ಅಗತ್ಯ’ ಎಂಬುದಾಗಿ ಪ್ರಧಾನಿ ಪಂಡಿತ್‌ ನೆಹರೂ ಅವರು ಇಂದು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧಿವೇಶನದಲ್ಲಿ ನುಡಿದರು.

ADVERTISEMENT

ಕಾರ್ಯ ಸಮಿತಿಯ ನಿರ್ಣಯವನ್ನು ಮಂಡಿಸುತ್ತ ನೆಹರೂ ಅವರು, ‘ಜನತೆಯ ಮನ್ನಣೆಗೆ ಪಾತ್ರವಾಗಿ ಕೋಟ್ಯಾಂತರ ಜನತೆಯಸಹಕಾರ ತರಬಲ್ಲಂಥ ಯೋಜನೆಯನ್ನು ಸಿದ್ಧಗೊಳಿಸಬೇಕಾದ್ದೆ ಇಂದು ಕಾಂಗ್ರೆಸ್ಸಿನ ಪ್ರಥಮ ಕರ್ತವ್ಯ’ ಎಂದು ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.