ಬೆಂಗಳೂರು, ಆಗಸ್ಟ್ 17– ದಕ್ಷಿಣ ಕನ್ನಡ ಜಿಲ್ಲೆಯ ಸೇಂದಿ ಇಳಿಸುವ ಮೂರ್ತೆದಾರರಿಗೆ ಹಾಗೂ ಕಂಟ್ರಾಕ್ಟರುಗಳಿಗೆ ಇರುವ ಭಿನ್ನಾಭಿಪ್ರಾಯದಲ್ಲಿ ಮೂರ್ತೆದಾರರಿಗೆ ಕಿರುಕುಳವಾಗದಂತೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕೂಡಲೇ ಸೂಚನೆ ಕಳುಹಿಸುವುದಾಗಿ ಲೋಕೋಪಯೋಗಿ ಸಚಿವ ಎಚ್.ಎಂ. ಚನ್ನಬಸಪ್ಪ ಅವರು ಇಂದು ವಿಧಾನಸಭೆಗೆ ಭರವಸೆ ನೀಡಿದರು.
ಕೂಲಿ ಹೆಚ್ಚಳ ವಿಚಾರವಾಗಿ ಭಿನ್ನಾಭಿಪ್ರಾಯವಿದ್ದು, ಕಂಟ್ರಾಕ್ಟರುಗಳು ತಮ್ಮ ಹಣ ಹಾಗೂ ಪ್ರಭಾವದಿಂದ ಪೊಲೀಸರನ್ನು ಬಳಸಿ ಮೂರ್ತೆದಾರರ ಮೇಲೆ ಹಲ್ಲೆ ನಡೆಸಿರುವುದಾಗಿ ಎಸ್. ಬಂಗಾರಪ್ಪನವರು ವಿಚಾರ ಪ್ರಸ್ತಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.