
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಡಿ. 23– ಭಾರತದ ಭವ್ಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಇಂದು ನಡೆದ ನಗರ ಕಾರ್ಪೊರೇಷನ್ ಚುನಾವಣೆಯಲ್ಲಿ ವಯಸ್ಕರು ಮತದಾನ ಮಾಡಿದರು.
ಸುಮಾರು 2 ಲಕ್ಷ 20 ಸಾವಿರ ಜನತೆಗೆ ಮತದಾನ ಮಾಡುವ ಅವಕಾಶ ಇಂದು ದೊರಕಿದ್ದು, ಶೇ 50ಕ್ಕಿಂತ ಹೆಚ್ಚು ಮಂದಿ ಓಟುದಾರರು 275 ಕೇಂದ್ರಗಳಿಗೆ ಹೋಗಿ 146 ಉಮೇದುವಾರರಲ್ಲಿ ತಾವು ಒಪ್ಪಿದ ‘ಬಣ್ಣ’ದವರಿಗೆ ಮತವಿತ್ತರು.
ಇಂದು ಬೆಳಿಗ್ಗೆ 7ರಿಂದ 12ರವರೆಗೆ ಮತ್ತು 1ರಿಂದ 6ರವರೆಗೆ ಕಾರ್ಪೊರೇಷನ್ ಚುನಾವಣೆ ನಡೆಯಿತು.
ಧ್ವನಿವರ್ಧಕ ಯಂತ್ರಗಳ ಕಾಟ
ಹೆಚ್ಚಾಗಿಲ್ಲದಿದ್ದರೂ, ಇಡೀ ನಗರ ಚುನಾವಣಾ ವಾತಾವರಣದಲ್ಲಿ ಸಿಲು
ಕಿತ್ತು. ಸುಮಾರು ಒಂದು ತಿಂಗಳಿನಿಂದ ಚುನಾವಣಾ ಪ್ರಚಾರಕ್ಕೆ ಪಳಗಿ ಹೋಗಿದ್ದ ನಗರದ ಓಟುದಾರರು ಸ್ವಲ್ಪ ಸಾವಕಾಶವಾಗಿಯೇ ಓಟು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.