ADVERTISEMENT

25 ವರ್ಷಗಳ ಹಿಂದೆ | ಅಂಕೋಲಾ: ಒಂದೇ ಕುಟುಂಬದ 9 ಜನರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 23:30 IST
Last Updated 24 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಅಂಕೋಲಾ: ಒಂದೇ ಕುಟುಂಬದ 9 ಜನರ ಆತ್ಮಹತ್ಯೆ

ಅಂಕೋಲಾ (ಕಾರವಾರ), ಫೆ. 24–ಮನೆಯ ಯಜಮಾನನ ವರ್ತನೆಯಿಂದ ಬೇಸತ್ತ ಆತನ ಹೆಂಡತಿ ಮತ್ತು 8 ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲ್ಲೂಕಿನಲ್ಲಿ ನಡೆದಿದೆ.

‘ಕಚ್ಚು ಗಣಪತಿ’ ಎಂದೇ ಹೆಸರಾಗಿರುವ ಗಣಪತಿ ಕುಸಲಪ್ಪ ನಾಯ್ಕ (50) ಅವರ ವಿಕ್ಷಿಪ್ತ ಸ್ವಭಾವ ಮತ್ತು ಊರಲ್ಲಿ ಕಟ್ಟಿಕೊಂಡ ದ್ವೇಷ ಮತ್ತು ಬೆಳೆಸಿಕೊಂಡ ತಿರಸ್ಕಾರದಿಂದ ಮನನೊಂದ ಈತನ ಹೆಂಡತಿ ಮತ್ತು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಶವಗಳು ಪತ್ತೆಯಾಗಿವೆ.

ADVERTISEMENT

ಕೃಷಿ ಉತ್ಪನ್ನ ಆಮದು ನಿರ್ಬಂಧ ಏಪ್ರಿಲ್‌ನಿಂದ ರದ್ದು

ನವದೆಹಲಿ, ಫೆ. 24 (ಯುಎನ್‌ಐ)– ವಿಶ್ವ ವಾಣಿಜ್ಯ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ಬರುವ ಏಪ್ರಿಲ್‌ನಿಂದ ಕೃಷಿ ಉತ್ಪನ್ನಗಳ ಮೇಲಿನ ಆಮದು ನಿರ್ಬಂಧ ರದ್ದಾಗ
ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.