
ಪ್ರಜಾವಾಣಿ ವಾರ್ತೆಬೆಂಗಳೂರು, ಜ. 18– ಸಭೆಯನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕಾಗಿ ರಾಜ ಪ್ರಮುಖರನ್ನು ವಂದಿಸುವ ನಿರ್ಣಯ ಇಂದು ಶಾಸನಸಭೆಯಲ್ಲಿ ಮಂಡಿಸಲ್ಪಟ್ಟು, ಸ್ವಲ್ಪ ಚರ್ಚೆಯಾದ ನಂತರ ನಿರ್ಣಯದ ಮೇಲೆ ಮಾತನಾಡುವವರೇ ಇಲ್ಲದೆ ಸಭೆ ಮುಂದುವರಿಯಿತು.
ಸಭೆ 1 ಗಂಟೆಗೆ ಸಮಾವೇಶಗೊಂಡಾಗ ಸರದಾರ್ ಪಟೇಲರನ್ನು ಸ್ಮರಿಸಿ ಎರಡು ನಿಮಿಷ ಮೌನದಿಂದ ಎದ್ದುನಿಂತು, ಅವರ ನಿಧನದ ಬಗ್ಗೆ ಸಂತಾಪ ಸೂಚಿಸಿತು. ವಿ. ವೆಂಕಟಪ್ಪನವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭೆ ಉಪಹಾರಕ್ಕೇಳುವ ಮುನ್ನ ಎಂ. ಗೋವಿಂದರೆಡ್ಡಿಯವರು ರಾಜ ಪ್ರಮುಖರನ್ನು ವಂದಿಸುವ ನಿರ್ಣಯವನ್ನು ಸಭೆಯಲ್ಲಿ ಮಂಡಿಸಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.