ADVERTISEMENT

ಶುಕ್ರವಾರ, 19–8–1994

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 20:01 IST
Last Updated 18 ಆಗಸ್ಟ್ 2019, 20:01 IST
   

‘ಅಯೋಧ್ಯೆ’ ತಂತ್ರ ಬೇಡ– ಬಿಜೆಪಿಗೆ ಕೇಂದ್ರ ಎಚ್ಚರಿಕೆ

‌ನವದೆಹಲಿ, ಆ. 18 (ಪಿಟಿಐ)–ಮುಂಬ ರುವ ವಿಧಾನಸಭಾ ಚುನಾವಣೆಗೆ ಹುಬ್ಬಳ್ಳಿ ಘಟನೆಯನ್ನು ಒಂದು ಅಸ್ತ್ರವಾಗಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ರೀತಿಯ ತಂತ್ರ ಬೇಡ. ಹುಬ್ಬಳ್ಳಿಯನ್ನು ಆಯೋಧ್ಯೆ ಕರ್ಮಕಾಂಡದಂತೆ ಮಾಡಲು ಬಿಡುವುದಿಲ್ಲ ಎಂದು ಸರ್ಕಾರ ಇಂದು ಬಿಜೆಪಿಗೆ ಎಚ್ಚರಿಕೆ ನೀಡಿದೆ.

ರಾಷ್ಟ್ರಧ್ವಜವನ್ನು ರಾಜಕೀಯ ಪ್ರಶ್ನೆಯಾಗಿ ಮಾಡುವುದು ಸರಿಯಲ್ಲ ಎಂದು ಸಂಸದೀಯ ವ್ಯವಹಾರ ರಾಜ್ಯ ಸಚಿವೆ ಮಾರ್ಗರೆಟ್‌ ಆಳ್ವ ಅವರು ಹೇಳಿದರು. ಹುಬ್ಬಳ್ಳಿ
ಘಟನೆಗಳ ಕುರಿತು ರಾಜ್ಯಸಭೆಯಲ್ಲಿ ನಾಲ್ಕು ಗಂಟೆ ಕಾಲ ನಡೆದ ಚರ್ಚೆಗಳಿಗೆ ಉತ್ತರ ನೀಡಿದ ಸಚಿವರು, ಧರ್ಮನಿರಪೇಕ್ಷತೆಯು ದೇಶದ ರಾಜಕೀಯದ ಮೂಲ
ಮಂತ್ರವಾಗಿದೆ. ಅದರಿಂದ ನಾವು ವಿಚಲಿತರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಪಾಕ್ ಪ್ಲುಟೋನಿಯಂ ಕಳ್ಳಸಾಗಣೆ ಸಾಬೀತು

ಲಂಡನ್, ಆ. 18 (ಪಿಟಿಐ)–ಪಾಕಿಸ್ತಾನವು ಈ ಹಿಂದಿನ ಸೋವಿಯತ್ ಒಕ್ಕೂಟದಿಂದ ಪರಮಾಣು ಅಸ್ತ್ರ ತಯಾರಿಕೆ ದರ್ಜೆಯ ಪ್ಲುಟೋನಿಯಂನ ಕಳ್ಳಸಾಗಣೆ
ನಡೆಸುತ್ತಿರುವುದನ್ನು ಸಾಬೀತುಪಡಿಸುವಂತಹ ದಾಖಲೆಗಳು ಜರ್ಮನಿಗೆ ದೊರೆತಿವೆ.

ಪಾಕಿಸ್ತಾನದ ಈ ಕಳ್ಳಸಾಗಾಣಿಕೆಯನ್ನು ‘ಶೀತಲ ಸಮರದ ನಂತರ ಒದಗಿರುವ ಬಹುದೊಡ್ಡ ರಕ್ಷಣಾ ಬೆದರಿಕೆ’ ಎಂದು ಪಶ್ಚಿಮದ ರಾಷ್ಟ್ರಗಳಲ್ಲಿ ನಂಬಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.