ADVERTISEMENT

ಭಾನುವಾರ, 19–6–1994

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:45 IST
Last Updated 18 ಜೂನ್ 2019, 19:45 IST
   

ಪು.ತಿ.ನ.ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್

ಬೆಂಗಳೂರು, ಜೂನ್ 18– ಕನ್ನಡದ ಸುಪ್ರಸಿದ್ಧ ಕವಿ ಡಾ. ಪು.ತಿ. ನರಸಿಂಹಾಚಾರ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್‌ಗೆ ಆಯ್ಕೆ ಆಗಿದ್ದಾರೆ. ಅಕಾಡೆಮಿ ಅಧ್ಯಕ್ಷ ಪ್ರೊ. ಯು.ಆರ್. ಅನಂತಮೂರ್ತಿ ಅವರು ಜೂನ್ 24ರಂದು ಪು.ತಿ.ನ ಅವರ ಮನೆಯಲ್ಲೇ ಫೆಲೋಷಿಪ್ ಸಲ್ಲಿಸುವರು.

ದಳ ಶಾಸಕರ ಅಮಾನತು ರದ್ದು ಸಂಭವ

ADVERTISEMENT

ಬೆಂಗಳೂರು, ಜೂನ್ 18– ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗೆ ಮತ ಚಲಾಯಿಸಿದ ಆಪಾದನೆ ಮೇಲೆ ಕೆಲವು ಶಾಸಕರನ್ನು ಶಾಸಕಾಂಗ ಪಕ್ಷದಿಂದ ಅಮಾನತುಗೊಳಿಸಿರುವುದನ್ನು, ನಾಳೆ ನಗರಕ್ಕೆ ಆಗಮಿಸಲಿರುವ ಜನತಾದಳದ ರಾಷ್ಟ್ರೀಯ ಅಧ್ಯಕ್ಷಎಸ್.ಆರ್. ಬೊಮ್ಮಾಯಿ ಅವರು ತೆರವು ಮಾಡಲಿದ್ದಾರೆ ಎಂಬ ಸಂಗತಿ ಪಕ್ಷದ ರಾಜ್ಯ ಘಟಕದ ನಾಯಕರಲ್ಲಿ ಇರಿಸು ಮುರಿಸು ಉಂಟು ಮಾಡಿದೆ.

ಬೊಮ್ಮಾಯಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ದೇವೇಗೌಡ, ಸಂಸದೀಯ ಮಂಡಲಿ ಅಧ್ಯಕ್ಷ ಜೆ.ಎಚ್. ಪಟೇಲ್ ಮತ್ತು ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಅವರು ಈ ಸಂಬಂಧ ನಾಳೆ ನಗರದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.