75 ವರ್ಷಗಳ ಹಿಂದೆ
ಬೆಂಗಳೂರು, ಜುಲೈ 31– ಮನೆ ಬಾಡಿಗೆ ಹತೋಟಿ ಅಧಿಕಾರಿ ಜನಾಬ್ ಟಿ.ಎ. ಬಷಿರುದ್ದೀನ್ ಅಹಮದ್ ಅವರ ಮೇಲಿನ ಲಂಚ ತಿಂದ ಆಪಾದನೆ ಮೊಕದ್ದಮೆಯ ಬಗ್ಗೆ ಫಸ್ಟ್ ಅಡಿಷನಲ್ ಸೆಷನ್ಸ್ ಜಡ್ಜ್ ಕೆ.ಆರ್.ತಿಮ್ಮರಾಯಶೆಟ್ಟಿ ಅವರು ಇಂದು ತೀರ್ಪಿತ್ತು, ಆಪಾದಿತರಿಗೆ 2 ವರ್ಷ ಕಠಿಣ ಶಿಕ್ಷೆ ಮತ್ತು ಒಂದು ಸಾವಿರ ರೂ. ಜುಲ್ಮಾನೆ, ತಪ್ಪಿದಲ್ಲಿ ಮತ್ತೆ 6 ತಿಂಗಳ ಕಠಿಣ ಶಿಕ್ಷೆ ವಿಧಿಸಿದರು.
ನ್ಯಾಯಾಧೀಶರು ಐಪಿಸಿ 161 ಮತ್ತು ಲಂಚ ನಿರೋಧ ಶಾಸನದ ಕ್ಲಾಸ್ 5(1) ಡಿ ರೀತ್ಯಾ ಎರಡು ಆಪಾದನೆಗಳಿಗೂ ಶಿಕ್ಷೆ ವಿಧಿಸಿ, ತೀರ್ಪಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.