ADVERTISEMENT

75 ವರ್ಷಗಳ ಹಿಂದೆ: ಬ್ರಿಟಿಷ್‌ ಸರ್ಕಾರದ ನಿರ್ಧಾರಕ್ಕೆ ಅಮೆರಿಕಾ ಕೈವಾಡವೇ ಕಾರಣ

ಮಂಗಳವಾರ, 14 ನವೆಂಬರ್ 1950

ಪ್ರಜಾವಾಣಿ ವಿಶೇಷ
Published 13 ನವೆಂಬರ್ 2025, 19:17 IST
Last Updated 13 ನವೆಂಬರ್ 2025, 19:17 IST
   

ಬ್ರಿಟಿಷ್‌ ಸರ್ಕಾರದ ನಿರ್ಧಾರಕ್ಕೆ ಅಮೆರಿಕಾ ಕೈವಾಡವೇ ಕಾರಣ

ಲಂಡನ್‌, ನ. 13– ವಿಶ್ವಶಾಂತಿ ಕಾಂಗ್ರೆಸ್‌ ಅಧಿವೇಶನ ಒಂದು ದಿನ ಮಾತ್ರ ಷೆಫೀಲ್ಡ್‌ ನಗರದಲ್ಲಿ ಸೇರಿ, ನಂತರ ವಾರ್ಸಾವಿನಲ್ಲಿ ಮುಂದುವರಿಯುವಂತೆ ತಡೆಯುಂಟಾದರೂ ಎದೆಗುಂದದೆ, ನಾಲ್ಕು ಮಂದಿಯ ಭಾರತ ನಿಯೋಗವಿಂದು ಷೆಫೀಲ್ಡಿಗೆ ಹೊರಟಿತು. ಈ ವಾರಾಂತ್ಯದಲ್ಲಿ ಪೋಲೆಂಡಿಗೆ ಹೋಗಲಿದೆ.

ಶಾಂತಿ ಸಮಿತಿಯ ಅನೇಕ ಪ್ರತಿನಿಧಿಗಳಿಗೆ ಪ್ರವೇಶಕ್ಕೆ ಅವಕಾಶ ಕೊಡದೆ ಅಧಿವೇಶನ ಸ್ಥಳವನ್ನು ವರ್ಗಾಯಿಸುವಂತೆ ಮಾಡಿರುವುದಕ್ಕಾಗಿ, ನಿಯೋಗದ ನಾಯಕರಾದ ಡಾ.ಅತಲರೂ, ಸದಸ್ಯರಾದ ಹರೀಂದ್ರನಾಥ ಚಟ್ಟೋಪಾಧ್ಯಾಯರೂ, ಬ್ರಿಟಿಷ್‌ ಸರ್ಕಾರದ ವರ್ತನೆಯನ್ನು ಟೀಕಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.