
ಪ್ರಜಾವಾಣಿ ವಾರ್ತೆ
ತೆರೆಸಾ: ನೂತನ ಮುಖ್ಯ ಕಾರ್ಯದರ್ಶಿ
ಬೆಂಗಳೂರು, ಡಿ. 29– ರಾಜ್ಯ ಸರ್ಕಾರದ ಪ್ರಥಮ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ
1965ರ ಐಎಎಸ್ ತಂಡದ ತೆರೆಸಾ ಭಟ್ಟಾಚಾರ್ಯ ಅವರನ್ನು ಮಂತ್ರಿಮಂಡಲವು ಇಂದು ನೇಮಕ ಮಾಡಿತು.
ಡಿ. 31ರಂದು ನಿವೃತ್ತರಾಗುವ ಬಿ.ಕೆ. ಭಟ್ಟಾಚಾರ್ಯರ ಸ್ಥಾನಕ್ಕೆ ಅವರನ್ನು ನೇಮಿಸಲಾಗಿದೆ.
ತೆರೆಸಾ, ಭಟ್ಟಾಚಾರ್ಯ ಅವರ ಪತ್ನಿ. ಅವರ ಸೇವಾವಧಿಯು 2002ರ ಮಾರ್ಚ್ 31ರವರೆಗೆ ಇದೆ. ತೆರೆಸಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.