
75 ವರ್ಷಗಳ ಹಿಂದೆ ಈ ದಿನ
ಮುಂಬಯಿ, ಡಿ. 26– ‘ರಾಜಕೀಯ ಹಾಗೂ ಸಂಸ್ಥೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ನಿರ್ದಿಷ್ಟ ನಿರ್ಧಾರ
ಗಳನ್ನು ಕೈಗೊಳ್ಳಲು’ ಭಾರತದ ಕಮ್ಯುನಿಸ್ಟ್ ಪಕ್ಷದ ಸಮ್ಮೇಳನವನ್ನು ‘ಆದಷ್ಟು ಜಾಗ್ರತೆ’ಯಾಗಿ ನಡೆಸಲು ತೀರ್ಮಾನಿಸಿರುವುದಾಗಿ, ಕೇಂದ್ರ ಸಮಿತಿಯು ಇತ್ತ ಹೇಳಿಕೆಯಲ್ಲಿ ತಿಳಿಸಿದೆ.
ಡಿಸೆಂಬರ್ ತಿಂಗಳಲ್ಲಿ ಸೇರಿದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ತೆಗೆದುಕೊಳ್ಳಲಾಯಿತು.
ಕಾರಣಾಂತರಗಳಿಂದ 1950ರ ಮೇ ತಿಂಗಳಲ್ಲಿ ನಡೆದ ಸಮಿತಿಯ ಸಭೆಗೆ ಭಾಗವಹಿಸಲಾಗದಿದ್ದ ಅನೇಕ ಹಳೆಯ ಕೇಂದ್ರ ಸಮಿತಿಯ ಸದಸ್ಯರು ಡಿಸೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದರು.
ಭಾಗವಹಿಸಿದ್ದವರ ಹೆಸರುಗಳನ್ನಾ
ಗಲೀ, ಯಾವ ಕಾರಣಗಳಿಂದ ಮುಂಚಿನ ಸಭೆಯಲ್ಲಿ ಭಾಗವಹಿಸಲಿಲ್ಲ
ಎಂಬುದನ್ನಾಗಲೀ ಕಮ್ಯುನಿಸ್ಟ್ ಪಕ್ಷವು ಹೇಳಿಕೆಯಲ್ಲಿ ತಿಳಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.