ADVERTISEMENT

ಭಾನುವಾರ, 13–7–1969

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:45 IST
Last Updated 12 ಜುಲೈ 2019, 19:45 IST
   

ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ: ಸಂಜೀವ ರೆಡ್ಡಿ

ಬೆಂಗಳೂರು, ಜುಲೈ 12– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಸಂಸ್ಥೆಯ ನಾಯಕರ ‘ಸಿಂಡಿಕೇಟ್’ ನಡುವೆ ಘರ್ಷಣೆಯಾದ ನಂತರ, ಲೋಕಸಭೆಯ ಅಧ್ಯಕ್ಷ ಶ್ರೀ ಎನ್. ಸಂಜೀವ ರೆಡ್ಡಿ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡ್ ಇಂದು ಆರಿಸಿತು.

ಬೋರ್ಡಿನ 8 ಮಂದಿ ಸದಸ್ಯರಲ್ಲಿ 5 ಮಂದಿ ಶ್ರೀ ರೆಡ್ಡಿ ಅವರ ಉಮೇದುವಾರಿಕೆಗೆ ಬೆಂಬಲ ನೀಡಿದರು. ಶ್ರೀಮತಿ ಗಾಂಧಿಯವರೂ ಸೇರಿ ಮೂರು ಮಂದಿ ಜಗಜೀವನರಾಂ ಅವರಿಗೆ ಬೆಂಬಲವಿತ್ತರು.

ADVERTISEMENT

ಕಾಸರಗೋಡು ಪ್ರಶ್ನೆ ಬೇಗಬಗೆಹರಿಸಲು ಪ್ರಧಾನಿ ಒತ್ತಾಯ

ಬೆಂಗಳೂರು, ಜುಲೈ 12– ಕಾಸರಗೋಡು ಪ್ರಶ್ನೆಯನ್ನು ಪ್ರತ್ಯೇಕವಾಗಿ ಪರಿಗಣನೆಗೆ ತೆಗೆದುಕೊಂಡು ಇತ್ಯರ್ಥ ಮಾಡಬೇಕೆಂದು ಕಾಸರಗೋಡಿನ ನಿಯೋಗವೊಂದು ಇಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರನ್ನು ಒತ್ತಾಯ ಮಾಡಿತು.

ಮಹಾಜನ ಆಯೋಗದ ವರದಿಯನ್ನು ಕಾರ್ಯರೂಪಕ್ಕೆ ತರಬೇಕೆಂದೂ ನಿಯೋಗ ಪ್ರಾರ್ಥಿಸಿತು.

ಪ್ರಾದೇಶಿಕ ಅಸಮತೆಯಿಂದಅಪಾಯ– ಎಂ.ವಿ.ಕೆ.

ಬೆಂಗಳೂರು, ಜುಲೈ 12– ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಪ್ರಾದೇಶಿಕ ಅಸಮತೆ’ಗಳನ್ನು ನಿವಾರಿಸಲು ತತ್‌ಕ್ಷಣ ಕ್ರಮ ಕೈಗೊಳ್ಳದಿದ್ದರೆ ‘ದೇಶದಲ್ಲಿ ಹೆಚ್ಚು ತೆಲಂಗಾಣಗಳ ಪುನರಾವರ್ತನೆಯಾಗುತ್ತದೆ’ ಎಂದು ರಾಜ್ಯದ ಮಾಜಿ ಸಚಿವ ಶ್ರೀ ಎಂ.ವಿ. ಕೃಷ್ಣಪ್ಪ ಅವರು ಇಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.