ADVERTISEMENT

ಭಾನುವಾರ, 7–9–1969

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 20:00 IST
Last Updated 6 ಸೆಪ್ಟೆಂಬರ್ 2019, 20:00 IST
   

ಕೊಸಿಗಿನ್ – ಇಂದಿರಾ ಚರ್ಚೆ

ನವದೆಹಲಿ, ಸೆ. 6– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರೊಡನೆ ತಾವು ‘ಬಹಳ ಉಪಯುಕ್ತ, ಮುಖ್ಯ ಮತ್ತು ಅವಶ್ಯ’‍ ಮಾತುಕತೆ ನಡೆಸಿದುದಾಗಿ ಸೋವಿಯತ್ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಅವರು ಇಂದು ಇಲ್ಲಿ ತಿಳಿಸಿದರು.

ಹೊ ಚಿ ಮಿನ್‌ ಅವರ ಅಂತ್ಯಕ್ರಿಯೆಗಾಗಿ ಹಾನಾಯ್‌ಗೆ ತೆರಳುವ ಮಾರ್ಗದಲ್ಲಿ ಕೊಸಿಗಿನ್ ಅವರು ಇಂದು ಬೆಳಿಗ್ಗೆ ಒಂದು ಗಂಟೆ ಕಾಲ ಇಲ್ಲಿನ ಪಾಲಂ ವಿಮಾನ ನಿಲ್ದಾಣದಲ್ಲಿ ಶ್ರೀಮತಿ ಗಾಂಧಿ ಅವರೊಡನೆ ಮಾತುಕತೆ ನಡೆಸಿದರು.

ADVERTISEMENT

ಸಂಪುಟಕ್ಕೆ ಮತ್ತೆ ಸೇರುವುದಿಲ್ಲ: ಮುರಾರಜಿ

ಅಹ್ಮದಾಬಾದ್, ಸೆ. 6– ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರ ಪ್ರಸಕ್ತ ಮನೋಭಾವನೆಯನ್ನನುಸರಿಸಿ ತಾವು ಮತ್ತೆ ಕೇಂದ್ರ ಸಂಪುಟಕ್ಕೆ ಸೇರುವ ಸಾಧ್ಯತೆಗಳಿಲ್ಲ ಎಂದು ಮಾಜಿ ಉಪ ಪ್ರಧಾನಮಂತ್ರಿ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ಘೋಷಿಸಿದರು.

ಪ್ರಧಾನಿಯ ಸಭಿಕರಾರು....

ಅಹ್ಮದಾಬಾದ್, ಸೆ. 6– ಇಂದು ಮುಂಜಾನೆ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಭಾಷಣ ಕೇಳಲು ಅವರ ನಿವಾಸದ ಬಳಿಗೆ ಬಂದಿದ್ದ ಸಭಿಕರ ಸ್ವರೂಪ ಹಾಗೂ ಸಂಖ್ಯಾಬಲವನ್ನು ಮಾಜಿ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿಯವರು ಇಂದು ಅಪಹಾಸ್ಯ ಮಾಡಿದರು.

‘ಆ ಸಭೆಯಲ್ಲಿ 200 ಅಥವಾ 300ಕ್ಕಿಂತ ಹೆಚ್ಚು ಜನರಿರಲಿಲ್ಲ. ಇನ್ನು ಆ ಸಭಿಕರಾದರೂ ಎಂತಹವರು? ಆ ರಿಕ್ಷಾವಾಲಾಗಳಿಗೆ, ಜಾಡಮಾಲಿಗಳಿಗೆ ಹಾಗೂ ಇಪ್ಪತ್ತರ ಗಡಿ ದಾಟದ ಶಾಲಾ ಬಾಲಕಿಯರಿಗೆಲ್ಲಾ ಬ್ಯಾಂಕ್ ರಾಷ್ಟ್ರೀಕರಣದ ಬಗ್ಗೆ ಕಿಂಚಿತ್ತಾದರೂ ಅರ್ಥವಾಗುತ್ತದೆಂದು ನೀವು ಭಾವಿಸಿದ್ದೀರಾ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.