
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಪಕ್ಷದ ವಿಶ್ವಾಸ ಕೇಳುವುದಾಗಿ ಶ್ರೀ ರೆಡ್ಡಿ
ಬೆಂಗಳೂರು, ಡಿ. 28– ಶಾಸನಸಭೆಯ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಅವಿಶ್ವಾಸ ಸೂಚಿಸಿರುವ ಸದಸ್ಯರಿಗೂ, ನಾಯಕರಿಗೂ ಪ್ರಶ್ನೆಯ ಇತ್ಯರ್ಥದ ವಿಧಾನದ ಬಗ್ಗೆ ಒಂದು ರೀತಿಯ ಒಪ್ಪಂದವಾಗಿ ಇಂದು ನಡೆದ ಪಕ್ಷದ ಸಭೆ ಮುಕ್ತಾಯಗೊಂಡಿತು.
35 ಮಂದಿ ಸದಸ್ಯರು ತಾವು ಕಳುಹಿಸಿದ್ದ ಅವಿಶ್ವಾಸ ನಿರ್ಣಯವನ್ನು ವಾಪಸು ಪಡೆದರು. ನಾಯಕತ್ವ ಪ್ರಶ್ನೆಯ ಇತ್ಯರ್ಥಕ್ಕಾಗಿ, ಜನವರಿ 10 ಅಥವಾ ಅದರೊಳಗಾಗಿ ಪಕ್ಷದ ಸಭೆ ಕರೆದು ಸಭೆಯ ವಿಶ್ವಾಸ ಕೇಳುವುದಾಗಿ ನಾಯಕ ಶ್ರೀ ರೆಡ್ಡಿ ತಿಳಿಸಿದರು.
ಸಭೆ ಮಧ್ಯಾಹ್ನ 1.30ಕ್ಕೆ ಕುಮಾರ ಪಾರ್ಕಿನಲ್ಲಿ ಪಕ್ಷದ ನಾಯಕ ಶ್ರೀ ಕೆ.ಸಿ.ರೆಡ್ಡಿಯವರ ಅಧ್ಯಕ್ಷತೆಯಲ್ಲಿ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.