ಬೆಂಗಳೂರು, ಡಿ. 25– ಮೊನ್ನೆ ನಡೆದ ಕಾರ್ಪೊರೇಷನ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಬಹುಮತದಿಂದ ಆರಿಸಿ ಬಂದಿದ್ದಾರೆ. ಕಾಂಗ್ರೆಸ್–45, ಸ್ವತಂತ್ರರು–20, ಸೋಷಲಿಸ್ಟ್–5 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಕಾರ್ಪೊರೇಷನ್ನಿನಲ್ಲಿ ಒಟ್ಟು 75 ಮಂದಿ ಸದಸ್ಯರಿರುವರು. 70 ಸ್ಥಾನಗಳ ಚುನಾವಣೆ ನಡೆದಿದೆ. ಕಾರ್ಪೊರೇಷನ್ 5 ಮಂದಿ ‘ನಗರದ ಹಿರಿಯ’ರನ್ನು ಚುನಾಯಿಸಿಕೊಳ್ಳಬೇಕಾದುದು ಮಾತ್ರ ಉಳಿದಿದೆ.
23ರಂದು ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೂ ಕಾಂಗ್ರೆಸ್ ಸ್ಪರ್ಧಿಸಿತ್ತು. ಸೋಷಲಿಸ್ಟ್ ಪಕ್ಷ 25 ಸ್ಥಾನಗಳಿಗೆ ಸ್ಪರ್ಧಿಸಿತ್ತು.
ಗುಂಟೂರಿನಲ್ಲಿ ಅಕ್ಕಿಯಿಲ್ಲ; ರೇಷನ್ ಅಂಗಡಿಗಳೆಲ್ಲ ಬಂದ್
ಗುಂಟೂರು, ಡಿ. 25– ಅಕ್ಕಿಯ ಅಭಾವದಿಂದ ಗುಂಟೂರಿನ ರೇಷನ್ ಅಂಗಡಿಗಳೆಲ್ಲ ಈ ತಿಂಗಳ ಹನ್ನೊಂದರಿಂದ ಮುಚ್ಚಿವೆ. ಇಲ್ಲಿನ ಮಂಡಿಗಳಲ್ಲಾಗಲೀ, ಚಿಲ್ಲರೆ ಅಂಗಡಿಗಳಲ್ಲಾಗಲಿ ಅಕ್ಕಿ ದಾಸ್ತಾನೇ ಇಲ್ಲವೆಂದು ಅಧಿಕೃತವಾಗಿ ಗೊತ್ತಾಗಿದೆ.
ಅಕ್ಕಿಯ ಸರಬರಾಜು ಈಗತಾನೇ ಬರುತ್ತಿದೆ. ರೇಷನ್ ಕಾರ್ಡ್ ಪಡೆದಿರುವವರಿಗೆ ಅಕ್ಕಿ ಕೊಡಲು ಇನ್ನೂ ಎರಡು–ಮೂರು ದಿನಗಳಾದೂ ಆಗಬಹುದೆಂಬ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.