ADVERTISEMENT

75 ವರ್ಷಗಳ ಹಿಂದೆ: ದೆಹಲಿ ಬ್ಯಾಂಕಿನಲ್ಲಿ ಹಗಲು ದರೋಡೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 0:35 IST
Last Updated 3 ಜನವರಿ 2026, 0:35 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ದೆಹಲಿ ಬ್ಯಾಂಕಿನಲ್ಲಿ ಹಗಲು ದರೋಡೆ

ನವದೆಹಲಿ, ಜ. 2– ವೇಷ ಮರೆಸಿಕೊಂಡ ಐದು ಮಂದಿ ಇಂದು ದೆಹಲಿಯಲ್ಲಿರುವ ಗೊಡೋಡಿಯ ಬ್ಯಾಂಕಿಗೆ ನುಗ್ಗಿ 16 ಸಹಸ್ರ ರೂಗಳಿದ್ದ ನಗದು ‍ಪೆಟ್ಟಿಗೆಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಡಕಾಯಿತರು ನಾಲ್ಕು ಸಾರಿ ಗುಂಡು ಹಾರಿಸಿದರು. ಒಂದು ಗುಂಡು 28 ವರ್ಷ ವಯಸ್ಸಿನ ಬ್ಯಾಂಕ್‌ ಅಕೌಂಟೆಂಟಿಗೆ ತಗುಲಿ ತೀವ್ರ ಗಾಯ ಮಾಡಿದೆ. ಗಾಯಗೊಂಡ ಅಕೌಂಟೆಂಟ್‌ ಪ್ರೇಮಚಂದ್ರ ಜೈನ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಅವರ ಸ್ಥಿತಿ ಚಿಂತಾಜನಕವಾಗಿದೆ.

ADVERTISEMENT

ಡಕಾಯಿತರು ಜೀಪಿನಲ್ಲಿ ಬಂದು ಬ್ಯಾಂಕಿಗೆ ಸಮೀಪದ ಕರೋಲ್‌ಬಾಗ್‌ ಬಳಿ ಇಳಿದು ರಿವಾಲ್ವರ್‌ ಮತ್ತು ರೈಫಲ್‌ ಸಮೇತ ಬ್ಯಾಂಕಿಗೆ ನುಗ್ಗಿ ಗುಂಡು ಹಾರಿಸಿ ಡಕಾಯಿತಿ ನಡೆಸಿದರೆಂಬುದು ಪೊಲೀಸರ ವರದಿ. ಪೊಲೀಸರು ಶೋಧನ ಕ್ರಮಕೈಗೊಂಡಿದ್ದಾರೆ. ಇದುವರೆಗೆ ಯಾರ ಬಂಧನವೂ ಆಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.