75 ವರ್ಷಗಳ ಹಿಂದೆ
ನವದೆಹಲಿ, ಜು.12: ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯ ಮಧ್ಯಸ್ಥಗಾರರಾದ ಸರ್ ಓವನ್ ಡಿಕ್ಸನ್ ಅವರು ಭಾರತದ ಪ್ರಧಾನಿ ಪಂಡಿತ ನೆಹರೂರವರೊಂದಿಗೆ ಮಾತುಕತೆ ನಡೆಸಿದ್ದಾರೆಂದು ಗೊತ್ತಾಗಿದೆ. ಭಾರತ–ಪಾಕಿಸ್ತಾನಗಳ ಪ್ರಧಾನಿಗಳೊಂದಿಗೆ ಡಿಕ್ಸನ್ನರು ಮಾತುಕತೆ ನಡೆಸುವುದಕ್ಕೆ ಪೂರ್ವಭಾವಿಯಾಗಿ ಸಿದ್ಧತೆಗಳು ನಡೆದವು.
ಭಾರತದ ಪ್ರಧಾನಿ ಜೊತೆ ಡಿಕ್ಸನ್ 45 ನಿಮಿಷ ಮಾತುಕತೆ ನಡೆಸಿದರು. ನಾಳೆ ಭೇಟಿ ನಡೆಯುವ ಏರ್ಪಾಟಿಲ್ಲ. ಶ್ರೀನಗರದಿಂದ ಬಂದೊಡನೆಯೆ ಡಿಕ್ಸನ್ ಅವರು ಭಾರತದ ಬಾಹ್ಯ ವ್ಯವಹಾರ ಶಾಕೆಯ ಮಹಾಕಾರ್ಯದರ್ಶಿ ಅವರೊಡನೆ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.