ADVERTISEMENT

25 ವರ್ಷಗಳ ಹಿಂದೆ | ಡಾ. ರಾಜ್ ಅಪಹರಣ: ಸಂಧಾನ ನಿರೀಕ್ಷೆಯಲ್ಲಿ ತಂಡ

ಪ್ರಜಾವಾಣಿ ವಿಶೇಷ
Published 11 ಅಕ್ಟೋಬರ್ 2025, 23:52 IST
Last Updated 11 ಅಕ್ಟೋಬರ್ 2025, 23:52 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಸಂಧಾನ ನಿರೀಕ್ಷೆಯಲ್ಲಿ ತಂಡ

ಬೆಂಗಳೂರು, ಅ.11– ಡಾ.ರಾಜ್‌ಕುಮಾರ್‌ ಅವರನ್ನು ಬಿಡಿಸಿಕೊಂಡು ಬರಲು ಪತ್ರಕರ್ತ ಆರ್‌.ಆರ್‌.ಗೋಪಾಲ್‌ ಅವರ ಜೊತೆ ಕಾಡಿಗೆ ತೆರಳಿರುವ ತಮಿಳು ರಾಷ್ಟ್ರೀಯ ಚಳವಳಿಯ ನಾಯಕ ಪಿ. ನೆಡುಮಾರನ್, ಮಾನವ ಹಕ್ಕುಗಳ ಜನರ ಸಂಘಟನೆ(ಪಿಯುಸಿಎಲ್‌)ಯ ಪ್ರೊ.ಕಲ್ಯಾಣಿ ಹಾಗೂ ಸುಕುಮಾರನ್‌ ಅವರು ವೀರಪ್ಪನ್ ಸಂದೇಶಕ್ಕಾಗಿ ಕಾಯುತ್ತಿದ್ದಾರೆ.

ಅವರು ನಿನ್ನೆ ಸಂಜೆ ಕಾಡಿಗೆ ತೆರಳಿದ್ದರು. ವೀರಪ್ಪನ್‌ನ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದಾರೆ. ಸಂದೇಶ ಬಂದ ತಕ್ಷಣ ವೀರಪ್ಪನ್‌ ಜೊತೆ ಮಾತುಕತೆ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT