ADVERTISEMENT

25 ವರ್ಷಗಳ ಹಿಂದೆ: ಜಮ್ಮು & ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಹತ್ಯೆ ಯತ್ನ ವಿಫಲ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 23:41 IST
Last Updated 14 ಜನವರಿ 2026, 23:41 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಫಾರೂಕ್ ಹತ್ಯೆಗೆ ವಿಫಲ ಯತ್ನ

ಶ್ರೀನಗರ, ಜ. 14 (ಪಿಟಿಐ)– ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ಹತ್ಯೆಗೆ ಇಂದು ಉಗ್ರಗಾಮಿಗಳು ವಿಫಲ ಯತ್ನ ಮಾಡಿದರು.

ಫಾರೂಕ್‌ ಅವರು ಹಬ್ಬಕಡಲ್‌ ನಲ್ಲಿ ಝೀಲಂ ನದಿಯ ಮೇಲೆ ಸೇತುವೆ ಉದ್ಘಾಟಿಸಿ ಭಾಷಣ ಮಾಡುತ್ತಿದ್ದಾಗ ಎರಡು ರೈಫಲ್‌ ಗ್ರೆನೇಡ್‌ಗಳನ್ನು ಅವರತ್ತ ಹಾರಿಸಲಾಯಿತು. ಒಂದು ಗ್ರೆನೇಡ್‌ ನದಿಗೆ ಬಿತ್ತು. ಮತ್ತೊಂದು ಸಮಾರಂಭ ಸ್ಥಳದ ಹೊರಗೆ ಸ್ಫೋಟ
ಗೊಂಡಿತು ಎಂದು ಅಧಿಕೃತ ಮೂಲ ಗಳು ತಿಳಿಸಿವೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಧ್ಯಾಹ್ನ ಸುಮಾರು 12.30ರಲ್ಲಿ ಈ ಘಟನೆ ನಡೆಯಿತು. ಈ ದಾಳಿ ನಡೆದ ನಂತರ ಕೆಲಕಾಲ ಕಾರ್ಯಕ್ರಮ ಮುಂದುವರಿಕೆಗೆ ಧಕ್ಕೆಯಾಯಿತು.

ಸಾಗರ: ಇನ್ನೂ ಐದು ಮಕ್ಕಳ ಜೀತಮುಕ್ತಿ

ಸಾಗರ, ಜ. 14– ಸಾಗರ ತಾಲ್ಲೂಕಿನ ಹಸಿರುಮಕ್ಕಿಯಲ್ಲಿ ತಮಿಳು ಬೆಸ್ತ ಕುಟುಂಬಗಳಲ್ಲಿ ಜೀತಕ್ಕಿದ್ದ ಇನ್ನೂ ಐದು ಮಕ್ಕಳನ್ನು ನಿನ್ನೆ ಸಂಜೆ ಜೀತಮುಕ್ತಿಗೊಳಿಸಲಾಗಿದೆ.

ADVERTISEMENT

ಹಸಿರುಮಕ್ಕಿಯ ಚಿನ್ನತಂಗವೇಲು ಎಂಬಾತನ ಬಳಿ ಜೀತ ಮಾಡುತ್ತಿದ್ದ ತಮಿಳುನಾಡಿನ ಸೇಲಂನ ಕುಮಾರ (18), ಕಾರ್ತಿಕ (16), ಗಣೇಶ ಎಂಬಾತನ ಬಳಿ ಜೀತ ಮಾಡುತ್ತಿದ್ದ ಸೇಲಂನ ಮುತ್ತುಕೃಷ್ಣ (18), ಬೆಂಗಳೂರಿನ ಮೆಜೆಸ್ಟಿಕ್‌ನ ಮಂಜು (10) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಮನಗರಂನ ಅಲ್ಲಾಭಕ್ಷ್‌ (13) ಅವರನ್ನು ರಕ್ಷಿಸಲಾಗಿದೆ.